ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನನ್ನೆ ಸೋಲಿಸಿದ್ದೇನೆ. ಇನ್ನೂ ಆತನ ಪೆದ್ದು ಮಗನನ್ನು ಸೋಲಿಸುವುದು ನಮಗೆ ಕಷ್ಟ ಆಗ್ತಿರಲಿಲ್ಲ. ಆದರೆ ಬಿಜೆಪಿ ಅವರು ನನ್ನ ಮಾತು ಕೇಳಲಿಲ್ಲ ಎಂದು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನಂಜನಗೂಡಿನಲ್ಲಿ ಮಾತನಾಡಿದ ಮಾಜಿ ಸಚಿವರು, ಬಿಜೆಪಿ ಅವರು ನನ್ನ ಮಾತು ಕೇಳಿದ್ದರೆ ಮೈಸೂರು ಭಾಗದಲ್ಲಿ ಇನ್ನೂ ಮೂರು ಕ್ಷೇತ್ರ ಗೆಲ್ಲಬಹುದಿತ್ತು. ಆದರಲ್ಲೂ ವರುಣಾ ಕ್ಷೇತ್ರವನ್ನು ನಿಶ್ಚಿತವಾಗಿ ಗೆಲುತ್ತಿದ್ದೇವು. ಅವರಪ್ಪನನ್ನೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದೇವೆ. ಇನ್ನೂ ಅವರ ಪೆದ್ದು ಮಗನನ್ನು ಸೋಲಿಸುವುದು ನಮಗೆ ಕಷ್ಟ ಆಗ್ತಿರಲಿಲ್ಲ. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ನನ್ನ ಮಾತು ಕೇಳಲಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಅಂತಾ ಹೋಟೆಲ್ ವ್ಯಾಪಾರಿಗೆ ಕೊಟ್ಟು ಕ್ಷೇತ್ರ ಕಳೆದು ಹೋಗುವಂತೆ ಮಾಡಿದರು ಎಂದರು.
Advertisement
Advertisement
ಸಿದ್ದರಾಮಯ್ಯನವರು ಮಂತ್ರಿ ಮಂಡಲದಲ್ಲಿ ಮಾತನಾಡಿದ ಮಾತನ್ನು ಮರೆತಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸೇರಿ 16 ಜನ ಮಂತ್ರಿಗಳು ಸೋತರು. 18 ರಿಂದ 78 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾದರು. ತಮ್ಮ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮಂತ್ರಿಗಳು ಹೀನಾಯವಾಗಿ ಸೋತರು. ನಂಜನಗೂಡು ಉಪ ಚುನಾವಣೆ ಫಲಿತಾಂಶದ ಬಳಿಕ ಆ ಮಹಾನ್ ನಾಯಕನನ್ನು ಸೋಲಿಸಿದ್ದೇನೆ ಎಂದು ನನ್ನನ್ನು ಟೀಕಿಸಿದ್ದರು.
Advertisement
ಲೋಕಸಭಾ ಚುನಾವಣೆಗೆ ನಾನು ಮತ್ತು ನನ್ನ ಸಂಬಂಧಿಕರು ಸ್ಪರ್ಧೆ ಮಾಡಲ್ಲ. ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ನಾಯಕರ ಬಳಿ ಹೇಳಿಕೊಂಡಿದ್ದಾರೆ. ಮುಂದಿನ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವುದಿಲ್ಲ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 16 ಲಕ್ಷಕ್ಕೂ ಅಧಿಕ ಮತಗಳಿವೆ. ಎಲ್ಲ ಕ್ಷೇತ್ರದ ನಾಯಕರು ಸೇರಿ ಅಭ್ಯರ್ಥಿ ಯಾರು ಎಂಬುವುದನ್ನು ಚರ್ಚಿಸಿ ಹೈಕಮಾಂಡ್ ಗೆ ತಿಳಿಸಬೇಕು. ಪಕ್ಷ ಸೂಚಿಸುವ ಅಭ್ಯರ್ಥಿಯ ಪರವಾಗಿ ನಾವು ಕೆಲಸ ಮಾಡುತ್ತೇವೆ ಎಂದು ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದರು. .
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews