ದಾವಣಗೆರೆ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಚಟುವಟಿಕೆ ಗರಿಗೆದರಿವೆ. ಸಂಸದ ಜಿ.ಎಂ ಸಿದ್ದೇಶ್ವರ್ ವಿರುದ್ಧ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (MP Renukacharya) ರೆಬಲ್ ಆಗಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಯಡಿಯೂರಪ್ಪ (BS Yediyurappa) ಹಾಗೂ ಈಶ್ವರಪ್ಪ ಜೋಡೆತ್ತುಗಳು, ಬಿಜೆಪಿ ಕಟ್ಟಿ ಬೆಳೆಸಿದವರು. ದಾವಣಗೆರೆ ಲೋಕಸಭಾ ಬಿಜೆಪಿ (BJP) ಅಭ್ಯರ್ಥಿ ಗೆಲ್ಲಿಸಲು ಸೂಚಿಸಿದ್ದಾರೆ. ಅಭ್ಯರ್ಥಿಯ ಹೆಸರು ಇನ್ನೂ ಘೋಷಣೆ ಆಗಿಲ್ಲ. ಯಡಿಯೂರಪ್ಪ ಮನೆಯಲ್ಲಿ ಚರ್ಚೆ ಮಾಡಿ ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯದಂತೆ ಸೂಕ್ತ ಪಾರದರ್ಶಕ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಅಂತಾ ಕೇಳಿದ್ದೇವೆ ಎಂದರು.
Advertisement
Advertisement
ಈ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ಎಸ್ ಎ ರವೀಂದ್ರನಾಥ್. ಚಿತ್ರದುರ್ಗ ಜಿಲ್ಲೆಗೆ ದಾವಣಗೆರೆ ಸೇರಿದಾಗ ಅಖಂಡ ಜಿಲ್ಲೆಗೆ ಜಿಲ್ಲಾಧ್ಯಕ್ಷರಾಗಿ ಎಸ್.ಎ ರವೀಂದ್ರನಾಥ್ ಪಟ್ಟ ಕಟ್ಟಿ ಬೆಳೆಸಿದ್ದಾರೆ. ದಾವಣಗೆರೆ ಜಿಲ್ಲೆಗೆ ಕಾರ್ಯಕರ್ತರ ಮುಖಂಡರ ಅಭಿಪ್ರಾಯದಂತೆ ಟಿಕೆಟ್ ಘೋಷಣೆ ಮಾಡಬೇಕು. ಏಕಮುಖವಾಗಿ ಟಿಕೆಟ್ ಘೋಷಣೆ ಮಾಡಿದ್ರೆ ನಾವು ಒಪ್ಪಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸೂಲಿಬೆಲೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಡ್ಡಿ – ವಿರೋಧದ ನಡ್ವೆ ಯಶಸ್ವಿಯಾದ ನಮೋ ಭಾರತ್
Advertisement
Advertisement
ಮುಖಂಡರ ಮತದಾರರ ಅಭಿಪ್ರಾಯದಂತೆ ಘೋಷಣೆ ಮಾಡುತ್ತೇವೆ ಎಂದಿದ್ದಾರೆ. ನಾನು ಪ್ರಬಲ ಆಕಾಂಕ್ಷಿ, ಜಿಲ್ಲೆಯಲ್ಲಿ ಕೋವಿಡ್ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇವೆ, ನಾವು ಸಮರ್ಥರಿದ್ದೇವೆ. ಕಾರ್ಯಕರ್ತರ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಲಿ. ಜೊತೆಗೆ ಹೊಸಬರಿಗೆ ಟಕೆಟ್ ನೀಡುವಂತೆ ಇದೇ ವೇಳೆ ಎಂಪಿ ರೇಣುಕಾಚಾರ್ಯ ಒತ್ತಾಯ ಮಾಡಿದರು.
ರೆಬಲ್ ಆಗಲು ಕಾರಣವೇನು..?: ಗುರುವಾರ ಜಿಲ್ಲಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಮಾತನಾಡುತ್ತಾ, ಸಿದ್ದೇಶ್ವರ್ ಕೊಡುಗೆ ಅಪಾರ ಇದೆ ಎಂದಿದ್ದರು. ವೇದಿಕೆ ಮೇಲೆ ಬಿಎಸ್‍ವೈ ಹೊಗಳಿದ್ದರಿಂದ ಜಿಎಂ ಸಿದ್ದೇಶ್ವರ್ ಅವರಿಗೆ ಈ ಬಾರಿ ಟಿಕೆಟ್ ಕನ್ಫರ್ಮ್ ಅಂತಾ ಕಾರ್ಯಕರ್ತರು ಅಂದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಮದು ರೇಣುಕಾಚರ್ಯ ಟಾಂಗ್ ನೀಡಿದ್ದಾರೆ.