ಉಡುಪಿ: ರಾಸಲೀಲೆ ಪ್ರಕರಣದಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ಎಚ್‍ವೈ ಮೇಟಿ ತನಗೆ ಅನ್ಯಾಯವಾಗಿದೆ ಅಂತ ದೈವಗಳ ಮೊರೆ ಹೋಗಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು ಮಹಾಸಂಸ್ಥಾನಕ್ಕೆ ಇಂದು ಭೇಟಿ ನೀಡಿ ಕುಂಡೋದರ ದೈವದ ಗುಡಿಯ ಮುಂದೆ ನಿಂತು ದೂರು ಗಂಟೆ ಹೊಡೆದರು. ತನಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ದೈವದ ಮುಂದೆ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
Advertisement
ವಿಶ್ವಭಾರತಿ ಸಂತೋಷ್ ಗುರೂಜಿ ಬಾರ್ಕೂರು ಸಂಸ್ಥಾನದ ಅಧಿಕಾರ ವಹಿಸಿಕೊಂಡ ನಂತರ ಪುರಾತನ ಕಾಲದ ಸಂಪ್ರದಾಯವನ್ನು ಮತ್ತೆ ಆರಂಭಿಸಿದ್ದಾರೆ. ತುಳುನಾಡನ್ನು ಆಳಿದ ಪಾಂಡ್ಯ ಅರಸರ ಕಾಲದಲ್ಲಿ ಇಂತದ್ದೊಂದು ನಂಬಿಕೆಯಿತ್ತು. ಯಾರಿಗಾದರೂ ಅನ್ಯಾಯವಾದ್ರೆ- ಮೋಸವಾದ್ರೆ- ಮನಸ್ಸಿನಲ್ಲಿ ಏನಾದ್ರು ಇಚ್ಛೆಗಳಿದ್ದರೆ ಅದನ್ನು ನೆನೆದುಕೊಂಡು ದೂರು ಗಂಟೆ ಬಾರಿಸಲಾಗುತ್ತಿತ್ತು. ಕುಂಡೋದರ ದೈವದ ಮುಂದೆ ನಿಂತು ತಮ್ಮ ನೋವನ್ನು ತೋಡಿಕೊಳ್ಳಲಾಗುತ್ತಿತ್ತು. ಇದೇ ಸಂಪ್ರದಾಯ ನಂಬಿಕೆಯನ್ನು ಮತ್ತೆ ಬಾರ್ಕೂರು ಸಸ್ಥಾನದ ಜೀರ್ಣೋದ್ಧಾರದ ನಂತರ ಆರಂಭಿಸಲಾಗಿದ್ದು ಮೇಟಿ ದೂರು ಗಂಟೆ ಬಾರಿಸಿದರು.
Advertisement
ನಂತೋಷ ಭಾರತಿ ಗುರೂಜಿ ಸಮ್ಮುಖದಲ್ಲಿ ನಡೆದ ದೈವಪಾತ್ರಿಯ ದರ್ಶನ ಸೇವೆಯಲ್ಲಿ ಪಾಲ್ಗೊಂಡರು. ಸಂಸ್ಥಾನದ ಪ್ರಸಾದ ಪಡೆದುಕೊಂಡು ಸಮಸ್ಯೆಗಳಿಂದ ಹೊರಗೆ ಬರುವಂತೆ ಬೇಡಿಕೊಂಡಿದ್ದಾರೆ. ಇದಕ್ಕೂ ಮೊದಲು ಎಚ್ ವೈ ಮೇಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನಗೈದು ಬಂದಿದ್ದರು. ಗೆಳೆಯರು ಮತ್ತು ಸಂಬಂಧಿಕರ ಜೊತೆ ರಾಜ್ಯದ ಪ್ರಮುಖ ದೇವಸ್ಥಾನಗಳ ಭೇಟಿ ಕಾರ್ಯದಲ್ಲಿ ತೊಡಗಿದ್ದಾರೆ.
Advertisement
Advertisement