– ಸೂರಜ್ ಮಹಾನ್ ದೈವ ಭಕ್ತ
ಮೈಸೂರು: ನಾನು ಸದ್ಯಕ್ಕೆ ಪ್ರಜ್ವಲ್ (Prajwal Revanna) ಭೇಟಿಗೆ ಹೋಗಲ್ಲ. ನಾನು ಭೇಟಿಗೆ ಹೋದರೆ ರೇವಣ್ಣ ಏನೋ ಹೇಳಿಕೋಟ್ಟ ಅಂತಾ ಹೇಳುತ್ತಾರೆ. ಹೀಗಾಗಿ ನಾನು ಹೋಗಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರು ಎಂದು ಮಾತು ಆರಂಭಿಸಿದ ರೇವಣ್ಣ, ಸೋಮವಾರ ನನ್ನ ಪತ್ನಿ ಹೋಗಿದ್ದಾರೆ, ಮಗ ಅಲ್ವ ಹೀಗಾಗಿ ಹೋಗಿದ್ದಾರೆ ಅಷ್ಟೇ. ತಾಯಿ-ಮಗ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ, ಕೇಳಲೂ ಹೋಗಿಲ್ಲ ಎಂದರು.
ಸೂರಜ್ ರೇವಣ್ಣ (Suraj Revanna) ಮಹಾನ್ ದೈವ ಭಕ್ತ. ಅವನು ಬಹಳ ಬೇಗ ಇದರಿಂದ ಹೊರಬರುತ್ತಾನೆ ಅನ್ನೋ ನಂಬಿಕೆ ಇದೆ. ಉಳಿದ ಯಾವ ವಿಚಾರಗಳ ಬಗ್ಗೆಯೂ ನಾನು ಮಾತನಾಡಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇವೆ. ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ ಎಂದು ರೇವಣ್ಣ ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನು ಸಿಎಂ ಮಾಡಿದ್ದು ಶಾಸಕರು: ನರೇಂದ್ರಸ್ವಾಮಿ
ಎಂಥೆಂತವರಿಗೋ ಕಷ್ಟ ಬರುತ್ತದೆ, ಅದ್ರಲ್ಲಿ ನಮ್ಮದು ಏನಿದೆ. ದೇವೇಗೌಡರು (HD Devegowda) ಒಂದು ತಿಂಗಳಿನಿಂದ ಸಹಜವಾಗಿ ನೋವಿನಲ್ಲೇ ಇದ್ದಾರೆ. ಎಲ್ಲದಕ್ಕೂ ಕಾಲದಲ್ಲಿ ಉತ್ತರ ಸಿಗುತ್ತದೆ. ನಾನು ಯಾವತ್ತೂ ಯಾವುದಕ್ಕೂ ಎದೆಗುಂದುವುದಿಲ್ಲ. 30 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಇಂಥವನೆಲ್ಲ ಬಹಳ ನೋಡಿದ್ದೇನೆ ಎಂದರು.