ಬೆಂಗಳೂರು: ಅವತ್ತು ಅವರು ಬಂದಾಗ ಇವರೇ ಎಲ್ಲಾ ಆಗಿ ಮುಂದೆ ನಿಂತು ಎಲ್ಲರನ್ನೂ ಕಾಪಾಡಿದ್ದರು. ಆದರೆ ಈ ಕಷ್ಟ ಕಾಲದಲ್ಲಿ ಅವರೆಲ್ಲಿ ಹೋದರು? ಏನು ಮಾಡುತ್ತಿದ್ದಾರೆ? ಯಾಕಾಗಿ ಈ ಮೌನ? ಪಕ್ಷಕ್ಕೆ ಏನೇ ಸಂಕಷ್ಟ ಎದುರಾದರೂ ಪಕ್ಷದ ಪಾಲಿಗೆ ಅವರೆ ಟ್ರಬಲ್‍ಶೂಟರ್. ಆದರೆ ಇಂತಹ ಸಂಕಷ್ಟದ ಸಂದರ್ಭದಲ್ಲೂ ಆ ನಾಯಕನ ಮೌನವೇಕೆ? ಇದು ಕಾಂಗ್ರೆಸ್‍ನ ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಕಾಂಗ್ರೆಸ್ ವಲಯದಲ್ಲೇ ಕೇಳಿಬರುತ್ತಿರುವ ಮಾತು.
Advertisement
ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಮುದಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿಯ ನಾಯಕರು ಮಧ್ಯಪ್ರದೇಶದ ನಾಲ್ವರು ಶಾಸಕರನ್ನ ಬೆಂಗಳೂರಿಗೆ ತಂದಿಟ್ಟುಕೊಂಡಿದ್ದಾರೆ. ಸಹಜವಾಗಿಯೇ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಕೈ ನಾಯಕರಿಗೆ ನೆನಪಾಗುವುದೇ ಡಿ.ಕೆ.ಶಿವಕುಮಾರ್. ಅಂದು ಗುಜರಾತ್ ಶಾಸಕರನ್ನು ರಾಜ್ಯಕ್ಕೆ ತಂದಿಟ್ಟುಕೊಂಡು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಸೆಡ್ಡು ಹೊಡೆದವರು ಡಿ.ಕೆ.ಶಿವಕುಮಾರ್. ಸಮ್ಮಿಶ್ರ ಸರ್ಕಾರ ಉಳಿಸಲು ಬಿಜೆಪಿ ಆಡಳಿತದ ಮಹರಾಷ್ಟ್ರದ ಮುಂಬೈಗೆ ಹೋಗಿ ಕಾಂಗ್ರೆಸ್ ಶಾಸಕರನ್ನು ಕರೆತರುವ ಯತ್ನಿಸಿದ್ದರು. ಇದನ್ನೂ ಓದಿ: ಆಪರೇಷನ್ ಮಧ್ಯಪ್ರದೇಶಕ್ಕೆ ಕರ್ನಾಟಕವೇ ಹೆಡ್ ಆಫೀಸ್
Advertisement
Advertisement
ಆದರೆ ಈಗ ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ತಂದಿಟ್ಟುಕೊಂಡಿದ್ದರೂ ಡಿ.ಕೆ.ಶಿವಕುಮಾರ್ ಸೈಲೆಂಟಾಗಿದ್ದಾರೆ. ಅದಕ್ಕೆ ಅವರು ಎದುರಿಸುತ್ತಿರುವ ಕಾನೂನಿನ ತೊಡಕಿನ ಕಾರಣವಿರಬಹುದು. ಆದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅಂತ ಪದೇ ಪದೇ ಹೇಳುವ ಡಿಕೆಶಿ ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ನೆರವಿಗೆ ಬಂದವರು. ಈಗ ವಿರೋಧಿ ಪಾಳಯ ಸ್ವಪಕ್ಷಿಯ ಶಾಸಕರನ್ನು ಬೆಂಗಳೂರಿಗೆ ಕರೆತಂದು ಬಚ್ಚಿಟ್ಟರು ಟ್ರಬಲ್ ಶೂಟರ್ ಮಾತ್ರ ಮೌನಕ್ಕೆ ಶರಣಾಗಿರುವುದು ಅಚ್ಚರಿಯೇ ಸರಿ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.