ರಾಯ್‌ಪುರ: ಒಂದು ಕಾಲದಲ್ಲಿ ಬಸ್ತಾರ್‌ನ ದಟ್ಟ ಕಾಡಿನಲ್ಲಿ ಬಂದೂಕು ಹಿಡಿದು ಓಡಾಡುತ್ತಿದ್ದ ಮಹಿಳೆಯರು, ಇದೀಗ ಕೈಮಗ್ಗದ ಬಟ್ಟೆ ತೊಟ್ಟು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಛತ್ತೀಸ್‌ಗಢದ (Chhattisgarh) ರಾಯ್‌ಪುರದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ (Handloom Day) ದಿನದ ಕಾರ್ಯಕ್ರಮದ ಈ ದೃಶ್ಯಗಳು (Ramp walk) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.
ನಕ್ಸಲ್ ಸಂಘಟನೆಯವರಾಗಿ ಗುರುತಿಸಿಕೊಂಡಿರುವ ಈ ಮಹಿಳೆಯರು ಶರಣಾಗಿ ಸಾಮಾನ್ಯ ಜೀವನ ನಡೆಸಬೇಕೆಂದು ತಮ್ಮ ಹಾದಿಯನ್ನು ಬದಲಿಸಿಕೊಂಡಿದ್ದಾರೆ. ಇತ್ತೀಚೆಗೆ ಫ್ಯಾಷನ್ ಶೋನಲ್ಲಿ ಕೈಮಗ್ಗದ ಉಡುಪುಗಳನ್ನು ಧರಿಸಿ ಆತ್ಮವಿಶ್ವಾಸದಿಂದ ರ‍್ಯಾಂಪ್ ಮೇಲೆ ನಡೆದ ಆ ಮಹಿಳೆಯರನ್ನು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಒಂದು ಕಾಲದಲ್ಲಿ ಹಿಂಸಾಚಾರ ಮತ್ತು ಸಂಘರ್ಷದ ನಡುವೆ ಬದುಕಿದ್ದ ಈ ಮಹಿಳೆಯರು ಈಗ ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಕೆಲವರು ವಿವಿಧ ಸಂಸ್ಥೆಗಳ ಜೊತೆ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಆದ ವೃತ್ತಿಜೀವನ ರೂಪಿಸಿಕೊಂಡು ಸಾಮಾನ್ಯ ಬದುಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ.
#WATCH | Raipur, Chhattisgarh: Former women Naxals, who once carried weapons in the dense forests of Bastar, walked the ramp to huge applause at a National Handloom Day event in Raipur after joining the mainstream. (07.08) pic.twitter.com/51mc8lEXWE
— ANI (@ANI) August 13, 2026
ಈ ರ‍್ಯಾಂಪ್ ವಾಕ್ ಕೇವಲ ಫ್ಯಾಷನ್ ಕಾರ್ಯಕ್ರಮವಷ್ಟೇ ಆಗಿರಲಿಲ್ಲ. ಶಸ್ತ್ರಾಸ್ತ್ರದ ಬದುಕನ್ನು ಬಿಟ್ಟು ಸರಳ ಜೀವನ ನಡೆಸಿದರೆ ಸಾವಿರಾರು ಹೊಸ ಅವಕಾಶಗಳು ನಿಮಗಾಗಿ ಕಾದಿರುತ್ತವೆ ಎಂಬ ಸಂದೇಶವನ್ನೂ ಈ ದೃಶ್ಯ ನೀಡಿದೆ. ಬಸ್ತಾರ್‌ನಂತಹ ಸಂಘರ್ಷಪೀಡಿತ ಪ್ರದೇಶಗಳಿಂದ ಬಂದ ಮಹಿಳೆಯರ ಈ ಬದಲಾವಣೆ ಹಲವರ ಗಮನ ಸೆಳೆದಿದೆ. ಇದನ್ನೂ ಓದಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಇತಿಹಾಸವನ್ನು ದೇಶದ ಜನತೆಗೆ ವಿವರಿಸಲಿ: ಪ್ರಿಯಾಂಕ್
ಇನ್ನು ಈ ರ‍್ಯಾಂಪ್‌ವಾಕ್‌ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ʼಕೆಲವು ವರ್ಷಗಳ ಹಿಂದೆ ನಾವು ಭವಿಷ್ಯದಲ್ಲಿ ಈ ರೀತಿಯ ಬದಲಾವಣೆಗಳನ್ನು ನೋಡುತ್ತೇವೆ ಎಂದು ಊಹಿಸಿರಲಿಲ್ಲ. ಇದು ನಿಜವಾದ ಸಬಲೀಕರಣʼ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು,
ಬಂದೂಕಿನಿಂದ ರ‍್ಯಾಂಪ್‌ವರೆಗೆ ನಡೆದ ಈ ಪ್ರಯಾಣ ಇದೀಗ ಹಲವರ ಗಮನ ಸೆಳೆದಿದ್ದು, ಮಾಜಿ ನಕ್ಸಲ್ ಮಹಿಳೆಯರ ಹೊಸ ಬದುಕಿನ ಕಥೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ದಾಖಲೆ ಬರೆದ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾ

