– ಬಿಜೆಪಿಯಿಂದ ನನ್ನ ಪತಿಗೆ ಆದ ಅನ್ಯಾಯಕ್ಕೆ, ಅವರ ಸಾವಿಗೆ ನ್ಯಾಯ ಕೊಡಿ ಎಂದು ಮನವಿ
ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ದಿವಂಗತ ಕೆ.ಶಿವರಾಮ್ (K.Shivaram) ಪತ್ನಿ ವಾಣಿ ಅವರು ಸೋಮವಾರ ಕಾಂಗ್ರೆಸ್ (Congress) ಸೇರ್ಪಡೆಯಾದರು.
Advertisement
ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ವಾಣಿ ಶಿವರಾಮ್ ಅವರಿಗೆ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಬರಮಾಡಿಕೊಂಡರು. ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಮಾಜಿ ಸಂಸದೆ ತೇಜಸ್ವಿನಿ ಗೌಡ ಆಗಮಿಸಿದ್ದರು. ಇದನ್ನೂ ಓದಿ: ಮೈತ್ರಿಗೆ ಬಿಗ್ ಶಾಕ್ – ಪ್ರೀತಂಗೌಡ ಆಪ್ತರಿಂದ `ಕೈ’ ಅಭ್ಯರ್ಥಿಗೆ ಬೆಂಬಲ
Advertisement
Advertisement
ಈ ವೇಳೆ ಮಾತನಾಡಿದ ವಾಣಿ ಶಿವರಾಮ್, ಬಿಜೆಪಿಯಿಂದ ನಮ್ಮ ಯಜಮಾನರಿಗೆ (ಕೆ.ಶಿವರಾಮ್) ಆದ ಅನ್ಯಾಯಕ್ಕೆ ಮತ್ತು ಅವರ ಸಾವಿಗೆ ನ್ಯಾಯ ಕೊಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.
Advertisement
ಕಾಂಗ್ರೆಸ್ ಪಕ್ಷ ನನ್ನನ್ನು ಗುರುತಿಸಿ ಕೈ ಹಿಡಿದಿದೆ. ನಿಮ್ಮೆಲ್ಲರ ಸೇವೆಗಾಗಿ ನಾನು ಸದಾ ಇರುತ್ತೇನೆ. ನನ್ನ ಪತಿಯ ಕೊನೆ ಆಸೆಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷದಲ್ಲಿ ನಾನು ಇರುತ್ತೇನೆ. ನಮ್ಮ ಯಜಮಾನರಿಗೆ ಆದ ಅನ್ಯಾಯಕ್ಕೆ ನೀವೆಲ್ಲ ಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ದಕ್ಷಿಣ ಭಾರತದ ‘ಪ್ರೀಮಿಯರ್ ಏವಿಯೇಷನ್ ಹಬ್’ ಆಗಿ ಬೆಂಗಳೂರು ಅಭಿವೃದ್ಧಿಪಡಿಸಲು ಏರ್ ಇಂಡಿಯಾದೊಂದಿಗೆ BIAL ಒಪ್ಪಂದ