ಬೆಂಗಳೂರು: ಸೋಮಶೇಖರ್ ವಿಷ ಕುಡಿದಿದ್ರೆ ಪಕ್ಷ ಬಿಟ್ಟು ಹೋಗಲಿ. ಯಾರೆಲ್ಲಾ ತಲೆಹರಟೆ ಮಾಡುತ್ತಾರೋ ಅವರನ್ನು ಯಾವಾಗ ತೆಗೆಯಬೇಕು ಎನ್ನುವುದು ಗೊತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ (Eshwarappa) ಹೇಳುವ ಮೂಲಕ ರೆಬೆಲ್‌ಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಬಿಜೆಪಿಯವರು (BJP) ಪಕ್ಷಕ್ಕೆ ಬರುವಾಗ ಜಾಮೂನು ಕೊಡುತ್ತಾರೆ. ಅಧಿಕಾರ ಮುಗಿದ ನಂತರ ವಿಷ ಕೊಡುತ್ತಾರೆ ಎಂದು ಮೈಸೂರಿನಲ್ಲಿ ಶಾಸಕ ಸೋಮಶೇಖರ್ (ST Somashekar) ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು.
Advertisement
ಸೋಮಶೇಖರ್ ಪಕ್ಷದಿಂದ ಹೊರ ಹೋಗಲಿ ಎಂದು ನಾನು ಹೇಳಿಯೇ ಇಲ್ಲ. ಅನೇಕರು ಜಾಮೂನು ತಿಂದಿದ್ದಾರೆ. ವಿಷ ಕುಡಿದವರು ಒಬ್ಬರಾದರೂ ಇದ್ದಾರಾ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.
Advertisement
Advertisement
ಅನೇಕ ಪಕ್ಷಗಳಿಂದ ಬಿಜೆಪಿಗೆ ಹಲವು ಮಂದಿ ಬಂದಿದ್ದು, ಪಕ್ಷದಲ್ಲಿ ಶಿಸ್ತು ಕ್ರಮದ ಅವಶ್ಯಕತೆ ಇದೆ. ಯಾರನ್ನು ಇಟ್ಟುಕೊಳ್ಳಬೇಕು, ಯಾರನ್ನು ತೆಗೆಯಬೇಕು ಅಂತಾ ನಾವು ನೋಡುತ್ತಿದ್ದೇವೆ. ಒಂದೇ ಸಲ ಪಕ್ಷ ಖಾಲಿ ಮಾಡಿಕೊಳ್ಳಲು ನಮ್ಮದು ಕಾಂಗ್ರೆಸ್ (Congress) ಅಲ್ಲ. ನಮ್ಮದು ಶಿಸ್ತಿನ ಪಕ್ಷ ನಾವು ಸರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯವ್ರು ಪಕ್ಷಕ್ಕೆ ಬರುವಾಗ ಜಾಮೂನು ಕೊಡ್ತಾರೆ, ಅಧಿಕಾರ ಮುಗಿದಾಗ ವಿಷ ಕೊಡ್ತಾರೆ: ಎಸ್‌ಟಿಎಸ್ ಕಿಡಿ
Advertisement
ಜಾಮೂನು ತಿಂದು ಮಂತ್ರಿಗಳಾದರು. ಅದರಿಂದ ನಾವೂ ಮಂತ್ರಿಗಳಾದೆವು, ಸರ್ಕಾರವೂ ಬಂತು. ಈಗ ಯಾವ್ಯಾವುದೋ ಕಾರಣಕ್ಕೆ ಸರ್ಕಾರ ಬರಲಿಲ್ಲ. ಈಗ ಸರ್ಕಾರ ಬಂದಿರುತ್ತಿದ್ದರೆ ಅವರು ಈ ಮಾತು ಹೇಳುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಸೋಮಶೇಖರ್ ಟೀಕಿಸುವುದು ನನ್ನ ಉದ್ದೇಶ ಅಲ್ಲ. ನೀವು ಇನ್ನೂ ಬಿಜೆಪಿಯಲ್ಲಿ ಇದ್ದೀರಿ. ನೀವು ಪಕ್ಷ ಬಿಟ್ಟು ಹೋಗಾಯ್ತಾ ಹಾಗಾದರೆ? ನೀವು ವಿಷ ಕುಡಿದಿದ್ದೀರಾ? ಬಿಜೆಪಿಯವರು ಕರೆದುಕೊಂಡು ಬಂದಾಗ ಹೇಗಿರುತ್ತಾರೆ? ಹೋಗುವಾಗ ಹೇಗಿರುತ್ತಾರೆ ಅಂತಾ ಜನ ನೋಡಿದ್ದಾರೆ. ಬಸವರಾಜ ಬೊಮ್ಮಾಯಿ ಬಂದಾಗ ಸಿಎಂ ಸ್ಥಾನ ಕೊಟ್ಟೆವು. ಅವರಿಗೆ ವಿಷ ಕೊಟ್ಟಿದ್ದೀವಾ ಎಂದು ಕೇಳಿದರು.
17 ಜನರಲ್ಲಿ ಅನೇಕ ಶಾಸಕರು ಬಿಜೆಪಿ ಜೊತೆ ಇದ್ದಾರೆ. ಅವರು ಯಾರೂ ವಿಷ ಕೊಟ್ಟಿದ್ದಾರೆ ಅಂತಾ ಹೇಳಲಿಲ್ಲ. ಪ್ರಾಣ ಹೋದರೂ ಬಿಟ್ಟು ಹೋಗಲ್ಲ ಎಂದು ಮುನಿರತ್ನ ಹೇಳಿದ್ದಾರೆ. ನೀವು ಪಕ್ಷ ಬಿಟ್ಟು ಹೋಗಿ ಅಂತಾ ನಾನು ಹೇಳಿಲ್ಲ. ಪಕ್ಷದಲ್ಲಿ ನಿಷ್ಠೆ ಇದ್ದು ನಂಬಿಕೆ ಇದ್ದರೆ ನಮ್ಮ ಜೊತೆ ಇರಿ ಅಂತಾ ಅಷ್ಟೇ ಹೇಳಿದ್ದೇನೆ ಎಂದರು.
ಅಧಿಕಾರ ಇದ್ದರೆ ಮಾತ್ರ ಬರುತ್ತೇನೆ, ಇಲ್ಲದಿದ್ದರೆ ಹೋಗುತ್ತೇನೆ ಅಂದರೆ ನಿನ್ನಿಷ್ಟ. ಅವರನ್ನು ಗೂಟ ಹೊಡೆದು ಇಟ್ಟುಕೊಳ್ಳಲು ನಾನ್ಯಾರು? ಅವರಿಗೆ ಅವರದ್ದೇ ಆದ ಸ್ವಾತಂತ್ರ್ಯ ಇದೆ. ಇದ್ದರೆ ಇರಬಹುದು, ಬಿಟ್ಟರೆ ಹೋಗಬಹುದು. ಹೋದ ಮೇಲೆ ಟೀಕೆ ಮಾಡಲಿ. ಇನ್ನೂ ಬಿಜೆಪಿಯಲ್ಲಿ ಇರುವಾಗ ಈ ರೀತಿ ಮಾತಾಡಬೇಡಿ ಎಂದು ಅವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.