ಕೋಲ್ಕತ್ತಾ: ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ 20 ಪಂದ್ಯವನ್ನು ಆಡಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದ ಎಡಗೈ ವೇಗದ ಬೌಲರ್ ಆಶಿಶ್ ನೆಹ್ರಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ನೆಹ್ರಾ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಬಗ್ಗೆ ಮಾಜಿ ಟೀಂ ಇಂಡಿಯಾ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ನೆಹ್ರಾ ಅವರನ್ನು ಸ್ವಾಗತಿಸಿದ್ದಾರೆ.
Advertisement
ಕ್ರಿಕೆಟ್ ನಲ್ಲಿ ನಮಗೆ ಮನರಂಜನೆ ನೀಡುತ್ತಿದ್ದ ನೆಹ್ರಾ ಇನ್ನು ಮುಂದೆ ಮೈಕ್ ಮುಂದೆ ಮನರಂಜನೆ ನೀಡಲಿದ್ದಾರೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
Advertisement
1979ರ ಏಪ್ರಿಲ್ 29ರಂದು ದೆಹಲಿಯಲ್ಲಿ ಜನಿಸಿದ ನೆಹ್ರಾಗೆ ಈಗ 38 ವರ್ಷ. 1999ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿಕೊಟ್ಟ ನೆಹ್ರಾ 2004ರಲ್ಲಿ ಪಾಕ್ ವಿರುದ್ಧ ರಾವಲ್ಪಿಂಡಿಯಲ್ಲಿ ಕೊನೆಯ ಟೆಸ್ಟ್ ಆಡಿದ್ದರು.
Advertisement
2001ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಏಕದಿನ ಆಡಿದ್ದರೆ, 2011ರಲ್ಲಿ ಮೊಹಾಲಿಯಲ್ಲಿ ಪಾಕ್ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. 2009ರಲ್ಲಿ ನಾಗ್ಪುರದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯ ಆಡಿದ್ದರು.
Advertisement
17 ಟೆಸ್ಟ್ ಗಳಿಂದ 44 ವಿಕೆಟ್ ಪಡೆದಿರುವ ನೆಹ್ರಾ 120 ಏಕದಿನದಿಂದ 157 ವಿಕೆಟ್ ಸಂಪಾದಿಸಿದ್ದಾರೆ. 27 ಟಿ20 ಪಂದ್ಯಗಳಿಂದ 34 ವಿಕೆಟ್ ಗಳಿಸಿದ್ದಾರೆ. ಕೊನೆಯ ಟಿ20 ಪಂದ್ಯದಲ್ಲಿ ನೆಹ್ರಾ 4 ಓವರ್ ಎಸೆದು 29 ರನ್ ನೀಡಿದ್ದರು.
ಇದನ್ನೂ ಓದಿ: ಮೊದಲ ಟಿ20ಯಲ್ಲಿ ನೆಹ್ರಾ ಕೊನೆಯ ಓವರ್ ಎಸೆದಿದ್ದು ಯಾಕೆ ಅನ್ನೋದು ರಿವೀಲ್ ಆಯ್ತು
Nehra ji ka commentary welcome zoron shoron se hona chahiye. Apne style me aap log bhi Nehra ji ko welcome zaroor karein https://t.co/dh9nPCPUQt
— Virender Sehwag (@virendersehwag) November 15, 2017
After entertaining us on the cricket field Nehra ji is all set to entertain us with the mic???? Welcome Ashu.Should be lots of fun @StarSportsIndia #IndvSL
— VVS Laxman (@VVSLaxman281) November 15, 2017
#IndvSL 1st day at the Eden Gardens
Toss: at 1:00 pm
Play start: 1:30 pm
Overs: min 55
Play
1:30 pm to 3:30 pm
3:50 pm to 5:30 pm
— Mohandas Menon (@mohanstatsman) November 16, 2017
Farewell to the man of the moment – Ashish Nehra #ThankYouAshishNehra pic.twitter.com/onuPCxU4r6
— BCCI (@BCCI) November 1, 2017