ಬಿಗ್ ಬಾಸ್ ಕನ್ನಡ 12ರ ಮನೆಗೆ ಸ್ಪೆಷಲ್ ಗೆಸ್ಟ್‌ಗಳು ಎಂಟ್ರಿ ಕೊಟ್ಟಿದ್ದಾರೆ. ಪಾರ್ಟಿ, ಮೋಜು-ಮಸ್ತಿ ಮೂಲಕ ಸ್ಪರ್ಧಿಗಳನ್ನು ರಂಜಿಸಲಿದ್ದಾರೆ. ಈ ದಿನದ ಸಂಚಿಕೆ ಬಿಗ್‌ಬಾಸ್ ವೀಕ್ಷಕರಿಗೆ ಕಿಕ್ ಕೊಡಲಿದೆ.
ಹೌದು, ಬಿಗ್‌ಬಾಸ್ ಪ್ರಸಾರ ವಾಹಿನಿ ಹಂಚಿಕೊಂಡಿರುವ ಪ್ರೋಮೊದಲ್ಲಿ, ಅರಮನೆಯಲ್ಲಿ ಪಾರ್ಟಿಯ ರಂಗು ಕಂಡುಬಂದಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಅರಮನೆಗೆ ಎಂಟ್ರಿ ಕೊಟ್ಟು ಹಾಲಿ ಸ್ಪರ್ಧಿಗಳನ್ನು ರಂಜಿಸಲಿದ್ದಾರೆ.
ಮನೆಯಲ್ಲಿ ಪಾರ್ಟಿ ನಡೆಯುತ್ತೆ; ನೀವು ಕುತ್ಕೊಂಡು ನೋಡಬೇಕು ಅಷ್ಟೇ!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/M8sA8vUWbs
— Colors Kannada (@ColorsKannada) November 25, 2025
ಪ್ರೋಮೊದಲ್ಲಿ ಏನಿದೆ?
ಬಿಗ್ ಬಾಸ್ ಮನೆಗೆ ಒಂದು ಕಾಲ್ ಬರುತ್ತೆ. ಅದನ್ನು ಸ್ಪಂದನಾ ರಿಸೀವ್ ಮಾಡ್ತಾರೆ. ಆ ಕಡೆಯಿಂದ, ‘ಇದು ಬಿಗ್ ಬಾಸ್ ಪ್ಯಾಲೆಸಾ?’ ಅಂತ ಕೇಳ್ತಾರೆ. ‘ಹೌದು..’ ಅಂತ ಸ್ಪಂದನಾ ಪ್ರತಿಕ್ರಿಯಿಸುತ್ತಾರೆ. ಆ ಕಡೆಯಿಂದ ‘ರೂಮ್ ಬುಕ್ ಮಾಡಿದ್ವಲ್ಲ.. ಆನ್ ದಿ ವೇ ನಾವು ಬರ್ತಿದ್ದೇವೆ. ದೊಡ್ಡ ಪಾರ್ಟಿ ನಡೆಯುತ್ತೆ’ ಅಂತ ಹೇಳ್ತಾರೆ. ಹೀಗೆ ಲ್ಯಾಂಡ್‌ಲೈನ್ ಕರೆಯಲ್ಲಿ ಮಾತನಾಡುವಾಗ ಮುಖ ತೋರಿಸಲ್ಲ. ಆದರೆ, ಹಾಗೆ ಮಾತನಾಡೋದು ಉಗ್ರಂ ಮಂಜು.
ಮನೆಗೆ ಒಂದು ವಾಹನ ಎಂಟ್ರಾಗುತ್ತೆ. ಅದರಲ್ಲಿ ಮಾಜಿ ಸ್ಪರ್ಧಿಗಳಿರುತ್ತಾರೆ. ಅವರನ್ನು ಕಂಡ ತಕ್ಷಣ ಸ್ಪರ್ಧಿಗಳು ಫುಲ್ ಖುಷ್ ಆಗ್ತಾರೆ. ಮಾಜಿ ಮತ್ತು ಮಾಜಿ ಸ್ಪರ್ಧಿಗಳ ಸಮಾಗಮ ಮನೆಯನ್ನು ರಂಗೇರಿಸಿದೆ.
ಚೈತ್ರಾ ಕುಂದಾಪುರ, ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್ ಬಿಗ್ ಬಾಸ್ ಪ್ಯಾಲೆಸ್‌ಗೆ ಅತಿಥಿಗಳಾಗಿ ಆಗಮಿಸಿದ್ದಾರೆ. ಅವರಿಗೆ ಹಾಲಿ ಸ್ಪರ್ಧಿಗಳು ಪಾರ್ಟಿ ಅರೆಂಜ್ ಮಾಡಿ ಖುಷಿ ಪಡಿಸ್ತಿದ್ದಾರೆ. ಈ ಸಂಚಿಕೆ ವೀಕ್ಷಿಕರಿಗೆ ಮಜಾ ಕೊಡಲಿದೆ.

