ಬೆಳಗಾವಿ: ದೇವೇಗೌಡರ (H.D.Deve Gowda) ಕುಟುಂಬದ ಸದಸ್ಯರು ಹಾಸನವಷ್ಟೇ ಅಲ್ಲ ಕರ್ನಾಟಕದ ಹೆಸರು ಕೆಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ (Veerappa Moily) ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ದೇವಗೌಡರ ಮಗ, ಮೊಮ್ಮಗನಿಂದ ಒಂದಲ್ಲ 2 ಸಾವಿರ ಮಹಿಳೆಯರ ಮೇಲೆ ದೌರ್ಜನ್ಯವಾಗಿದೆ. ದೇವೇಗೌಡರ ಕುಟುಂಬ ಸದಸ್ಯರು ಹಾಸನವಷ್ಟೇ ಅಲ್ಲ ಕರ್ನಾಟಕದ ಹೆಸರು ಕೆಡಿಸಿದ್ದಾರೆ. ರಾಜಕೀಯ ಕೆಡಸಿದ್ದಾರೆ, ದೇಶದ ಎದುರು ಕರ್ನಾಟಕ ತಲೆತಗ್ಗಿಸುವಂತೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಾರಿಶಕ್ತಿ, ಬೇಟಿ ಪಡಾವೋ, ಬೇಟಿ ಬಚಾವೋ ಅಂತಾರೆ. ಭಾರತ ಸರ್ಕಾರದ ಬಳಿಯೇ ನ್ಯಾಷನಲ್ ಕ್ರೈಂ ರೆಕಾರ್ಡ್ ಮಾಹಿತಿ ಇದೆ. ಯುಪಿಎ ಸಮಯದಲ್ಲಿ ಮೂರು ಲಕ್ಷ ಮಹಿಳೆಯರ ಮೇಲೆ ದೌರ್ಜನ್ಯ ಆಗ್ತಿತ್ತು. ಈಗ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ 22 ಲಕ್ಷ ದಾಟಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ: ಅಣ್ಣಾಮಲೈ
- Advertisement
ಬಿಜೆಪಿ ಆಡಳಿತ ನಡೆಸುತ್ತಿರುವ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಅಧಿಕವಾಗಿವೆ. ಪ್ರಜ್ವಲ್ ಸೆಕ್ಸ್ ಸ್ಕ್ಯಾಂಡಲ್‌ನ ಎಲ್ಲ ಸೂತ್ರದಾರರು ಪ್ರಧಾನಿ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಮಲಗಿದ್ದಾರೆಯೇ? ಇಂಥ ಕೃತ್ಯ ಎಸಗಿ, ಹಣದೋಚಿಕೊಂಡು ದೇಶದಿಂದ ಪರಾರಿ ಆಗ್ತಿದ್ದಾರೆ. ಕೇಂದ್ರದಲ್ಲಿ ಇಂಥ ಸರ್ಕಾರ ಇದ್ದರೆ ಏನು ಪ್ರಯೋಜನ ಎಂದು ಮೊಯ್ಲಿ ಆಕ್ರೋಶ ಹೊರಹಾಕಿದರು.
- Advertisement
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವೂ ಆಗಲಿಲ್ಲ. ಮಹಾದಾಯಿ ಯೋಜನೆಯನ್ನು ಜಾರಿಗೆ ತರಲಿಲ್ಲ. ಕರ್ನಾಟಕದಲ್ಲಿ ನರೇಂದ್ರ ಮೋದಿಗೆ ಮತ ಕೇಳಲು ನೈತಿಕ ಹಕ್ಕೂ ಇಲ್ಲ, ಭೌತಿಕ ಹಕ್ಕೂ ಇಲ್ಲ. ಹೊಸ ಮುಖಗಳಿಗೆ ಈ ಸಲ ಕಾಂಗ್ರೆಸ್ ಅವಕಾಶ ಕೊಟ್ಟಿದೆ, ಅವರ ಗೆಲುವು ಆಗಬೇಕು. ಬೆಳಗಾವಿ ಬಿಜೆಪಿ ಟಿಕೆಟ್ ಆ ಪುಣ್ಯಾತ್ಮ ಜಗದೀಶ್ ಶೆಟ್ಟರ್‌ಗೆ ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ಜಗದೀಶ್ ಶೆಟ್ಟರ್ ವಿಶ್ವಾಸದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಹಂಚಿದ ಆರೋಪ- ನವೀನ್ ಗೌಡಗೆ SIT ನೋಟಿಸ್
ಅನಾರೋಗ್ಯದ ಮಧ್ಯೆಯೂ ಸೋನಿಯಾ ಗಾಂಧಿ ಹುಬ್ಬಳ್ಳಿಗೆ ಬಂದು ಪ್ರಚಾರ ಮಾಡಿದ್ರು. ನಮ್ಮ ಜೊತೆಗೆ ಬಂದವರಿಗೆ ಗೌರವ ಕೊಡಬೇಕೆಂದು ಅಂದು ಸೋನಿಯಾ ಬಂದಿದ್ರು. ಹೀಗಿದ್ದರೂ ಈ ಪುಣ್ಯಾತ್ಮನಿಗೆ ಕೃತಜ್ಞತಾ ಭಾವ ಇಲ್ಲ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದು ಯಾರಿಗೂ ನೆನಪಿಲ್ಲ. ಏಕೆಂದರೆ ಅವರ ಕೊಡುಗೆ ಶೂನ್ಯ. ಹುಬ್ಬಳ್ಳಿಯಿಂದ ಕಣಕ್ಕಿಳಿದಿದ್ರೆ ಇನ್ನೂ ಹಲವು ಸಲ ಸೋಲಿಸುತ್ತಿದ್ದರು. ಅಲ್ಲಿ ಸಲ್ಲದವರು ಇಲ್ಲಿ ಸಲ್ಲುವುದು ಸಾಧ್ಯವೇ? ಪಾಪ ಮಹಿಳೆ, ಗಂಡನ ಕಳೆದುಕೊಂಡ ವಿಧವೆಯ ಟಿಕೆಟ್‌ನ್ನು ಶೆಟ್ಟರ್ ತಪ್ಪಿಸಿದರು. ವಿಧವೆ ಟಿಕೆಟ್ ತಪ್ಪಿಸಿ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸ್ಫರ್ಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಿದ್ದು ನಾಚಿಕೆಗೇಡಿನ ಸಂಗತಿ. ದೇವಗೌಡರು ಈ ಪ್ರಕರಣದಲ್ಲಿ ಸುಮ್ಮನೆ ಇರಬೇಕು, ಅಂದಾಗ ಅವರೂ ಕೃತ್ಯ ಖಂಡಿಸಿದಂತೆ ಆಗ್ತದೆ. ರಮೇಶ್ ಜಾರಕಿಹೊಳಿ, ಪ್ರಜ್ವಲ್ ರೇವಣ್ಣ ಅನ್ಯಾಯ ಮಾಡಿದ್ದಾರೆ. ಈ ಇಬ್ಬರು ಏನು ಪುರುಷಾರ್ಥದ ಕೆಲಸ ಮಾಡಿದ್ದಾರಾ? ದೌರ್ಜನ್ಯ ಎಸಗಿದ್ದು ಸ್ಪಷ್ಟವಾಗಿದೆ. ದಾಖಲೆಗಳಿವೆ ನಾಚಿಕೆಗೇಡಿನ ಕೆಲಸ ಮಾಡಿದ್ದಾರೆ. ಈಗ ಡಿಕೆ ಶಿವಕುಮಾರ್ ವಿರುದ್ಧ ಬೆರಳು ತೋರುವ ಕೆಲಸ ಮಾಡಬಾರದು ಎಂದರು.