ಚುನಾವಣಾ ರಾಜಕಾರಣದಿಂದ ಹಿಂದೆ‌ ಸರಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ

Public TV
3 Min Read
M Veerappa Moily

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapura) ಲೋಕಸಭಾ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.

ಸೋಮವಾರ ಚಿಕ್ಕಬಳ್ಳಾಪುರ ನಗರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಅಭ್ಯರ್ಥಿ ರಕ್ಷಾರಾಮಯ್ಯ (Raksha Ramaiah) ಅವರಿಗೆ ಸಂಪೂರ್ಣ ಬೆಂಬಲ ಕೊಡುವುದಾಗಿ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ – ಪ್ರಚಾರದ ವೇಳೆ ಭದ್ರತಾ ವೈಫಲ್ಯ?

veerappa moily raksha ramaiah

ನಾನು ಲೋಕಸಭಾ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ಪಟ್ಟೆ. ಆದರೆ ಹೈಕಮಾಂಡ್‌ ರಕ್ಷಾರಾಮಯ್ಯ ಅವರಿಗೆ ಟಿಕೆಟ್ ಕೊಟ್ಟಿದೆ. ಈಗ ನನ್ನ ಸಂಪೂರ್ಣ ಬೆಂಬಲ ರಕ್ಷಾರಾಮಯ್ಯ ಅವರಿಗೆ ನೀಡಲಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ನಂಬಿ ಕಾಂಗ್ರೆಸ್ ಕೆಟ್ಟಿತ್ತು. ಆದರೆ ಈಗ ಜೆಡಿಎಸ್ ನಂಬಿ ಬಿಜೆಪಿ ಕೆಡಲಿದೆ. ಚಿಕ್ಕಬಳ್ಳಾಪುರದ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇದು ಅಭ್ಯರ್ಥಿಗೆ ಸಾಕಷ್ಟು ದೊಡ್ಡ ಶಕ್ತಿಯಾಗಿದೆ. ನಾನು ಸ್ಪರ್ಧಿಸುವಾಗ ಇಷ್ಟೊಂದು ಬೆಂಬಲ ಇರಲಿಲ್ಲ. ಆದರೆ ರಕ್ಷಾರಾಮಯ್ಯ ಅವರಿಗೆ ಆನೆ ಬಲ ಇದೆ. ನಿಮಗೆ ಸಾಕಷ್ಟು ಸೌಭಾಗ್ಯ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಬೇಕು. ಕಾಂಗ್ರೆಸ್ ಭದ್ರಕೋಟೆ ಇಲ್ಲಿ ಗೆದ್ದರೆ ಇಡೀ ಜ್ಯಾತ್ಯತೀತ ಗೆಲ್ಲಲಿದೆ. ಈಗ ಸ್ಥಳೀಯ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲು ಬೇರೆ ಬೇರೆ ಚಟುವಟಿಕೆ ನಡೆಸುತ್ತಾರೆ. ಆದರೆ ನಾವೆಲ್ಲಾ ಒಗ್ಗಟ್ಟಾಗಿ ಅಭ್ಯರ್ಥಿ ಗೆಲುವಿಗೆ ರಾತ್ರಿ ಹಗಲು ಶ್ರಮಿಸಬೇಕು ಎಂದು ಕರೆ ನೀಡಿದರು.

ನನಗೆ ಲೋಕಸಭಾ ಅಭ್ಯರ್ಥಿ ಸ್ಥಾನದಿಂದ ಈಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಯಾಕೆಂದರೆ ಸಂಸದರ ಸ್ಥಾನ ಯಾರೂ ಬಿಡಲ್ಲ. ಆದರೆ ಹೈಕಮಾಂಡ್ ತೀರ್ಮಾನದಂತೆ ನೂರಕ್ಕೆ ನೂರರಷ್ಟು ಬೆಂಬಲ ಸೂಚಿಸಲಿದ್ದೇನೆ. ಮುಖ್ಯಮಂತ್ರಿ ಆದರೂ ನಿಷ್ಠಾವಂತನಾಗಿದ್ದರೆ ಅದು ನಾನು ಮಾತ್ರ. ಸಾಯುವವರೆಗೂ ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. 10 ವರ್ಷದಿಂದ ನಡೆಯದಿರುವ ಕೆಲಸ ನೀವು ಐದು ವರ್ಷದಲ್ಲಿ ಮಾಡಬೇಕಿದೆ. 2 ವರ್ಷದಲ್ಲಿ ಎತ್ತಿನಹೊಳೆ ನೀರು ಬರಲು ಹೋರಾಡಬೇಕು.‌ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಲಸೆ ಹೋಗುತ್ತಾರೆ ಎಂದು ವರದಿಯಾಗಿತ್ತು. ಬಾಗೇಪಲ್ಲಿ ಬಳಿ ಫ್ಲೋರೈಡ್‌ ಇತ್ತು. ಇದನ್ನೆಲ್ಲ ಹೋಗಲಾಡಿಸಲು ನಾನು ಶ್ರಮವಹಿಸಿದ್ದೆ. ಅದೇ ರೀತಿ ನೀನು ಮಾಡಬೇಕು. ಇದು ನನ್ನ ಕನಸಿನ ಕೂಸು ಎಂದು ಅಭ್ಯರ್ಥಿ ರಕ್ಷಾರಾಮಯ್ಯ ಅವರಿಗೆ ಕೆಲವು ಸೂಚನೆಗಳನ್ನು ‌ಮೊಯ್ಲಿ ನೀಡಿದರು. ಇದನ್ನೂ ಓದಿ: ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮ್‌ ಪತ್ನಿ ಕಾಂಗ್ರೆಸ್‌ ಸೇರ್ಪಡೆ

Veerappa Moily 1

ಎಲ್‌.ಕೆ.ಅಡ್ವಾಣಿ ಪ್ರಧಾನಿಯಾಗಬೇಕಿತ್ತು, ಆದರೆ ಆಗಲಿಲ್ಲ. ಆ ಸಮಯದಲ್ಲಿ ಮೋದಿ ಒಬ್ಬ ಈವೆಂಟ್ ಮ್ಯಾನೇಜರ್ ಎಂದು ಹೇಳಿದ್ದರು. ಆದರೆ ಮೋದಿ ಇಂದಿಗೂ ಸಹಾ ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಪುಲ್ವಾಮಾ ದಾಳಿ ನಡೆಸುತ್ತಾರೆ. ಇನ್ನೂ ಚುನಾವಣೆ ಒಳಗೆ ಮತ್ತೆ ಏನಾದ್ರು ಮಡ್ತಾರೆ ಕಾಯ್ತಾ ಇರೀ. ಸಾಕಷ್ಟು ರಾಷ್ಟ್ರೀಯ ಹೆದ್ದಾರಿಗಳು‌ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದೆ. ಆದರೆ ನಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. 2004 ರಲ್ಲಿ ಕಾರ್ಗಿಲ್ ಯುದ್ಧವಾಯ್ತು. ಆಗ ಶೈನಿಂಗ್ ಇಂಡಿಯಾ ಎಂದು ಬಿಜೆಪಿ ಹೇಳಿತ್ತು, ಆದರೆ ಸೋತಿತ್ತು. ಆದರೆ ಅದೇ ರೀತಿ ಈಗ ಬಿಜೆಪಿ ಸೋಲುತ್ತೆ. ಈಗ ಅಭಿವೃದ್ಧಿ ಇಲ್ಲ. ಉದ್ಯೋಗ ಸೃಷ್ಟಿ ಇಲ್ಲ. ಇದರಿಂದ ಕೆಲವೇ ದಿನಗಳಲ್ಲಿ ಯುವಜನತೆ ಎದ್ದು ನಿಲ್ಲುತ್ತಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ಥಳೀಯ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ ವೇಳೆ ಕಣ್ಣೀರು ಸುರಿಸಿದ್ದು ಇದೇ ವಿಚಾರಕ್ಕೆ ಎಂದು ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಅವರು ಮಾಡಿದ ಪಾಪ ಕಣ್ಣೀರಿನ ಮೂಲಕ ಬಂದಿದೆ. ಅದು ಸಾಕಾಗಲ್ಲ. ಅವರಿಗೆ ರಕ್ತ ಕಣ್ಣೀರು ಬರಬೇಕು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿದ್ದರಾಮಯ್ಯ ಬರೀ ಸೌಂಡ್ ಬಾಕ್ಸ್, ಅಬ್ಬರ ಮಾಡುತ್ತೆ ಅಷ್ಟೇ: ಅಶ್ವಥ್ ನಾರಾಯಣ್

Share This Article