ಮೈಸೂರು: ಇಂಟರ್‌ವಲ್ ಬಿಟ್ ವಿನ್ ಪಾಲಿಟಿಕ್ಸ್ ಇರಬೇಕು. ನಿನ್ನೆ ಐಪಿಎಲ್ ಮ್ಯಾಚ್ ನೋಡಲು ಹೋಗಿದ್ದೆ. ಪಾಪ ಸೋತುಬಿಟ್ಟರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ.
ನಿನ್ನೆ ಐಪಿಎಲ್ ಮ್ಯಾಚ್ ನೋಡಲು ಹೋಗಿದ್ದೆ. ಪಾಪ ಆರ್‌ಸಿಬಿ ಸೋತು ಬಿಟ್ಟಿತು. ನಾನು 11 ಗಂಟೆಗೆ ವಾಪಸ್ ಬಂದುಬಿಟ್ಟೆ. ಪಂದ್ಯ ಮುಗಿಯುವವರೆಗೂ ಇರಲಿಲ್ಲ. ಯಾವಾಗಲೂ ಇಂಟರ್‌ವಲ್ ಬಿಟ್ ವಿನ್ ಪಾಲಿಟಿಕ್ಸ್ ಇರಬೇಕು. ನಾವು ಯಾವಾಗಲೂ ರಾಜಕೀಯ ಜಂಜಾಟದಲ್ಲಿ ಇರುತ್ತೇವೆ. ಹಾಗಾಗಿ ರಾಜಕೀಯದ ಮಧ್ಯೆ ಇವೆಲ್ಲ ಇರಬೇಕು ಎಂದರು.
Advertisement
Advertisement
ಬಿಜೆಪಿ ಬಳಿ ದುಡಿಲ್ವಾ?
ಐಟಿ ರೇಡ್ ಮಾಡುವುದ್ದಕ್ಕೆ ನಮ್ಮ ವಿರೋಧ ಇಲ್ಲ. ರಾಜಕೀಯ ದುರುದ್ದೇಶ ಇಟ್ಟುಕೊಂಡು ಐಟಿ ರೇಡ್ ಮಾಡಬೇಡಿ. ಬೇರೆ ಸಮಯ ಯಾಕೆ ಇಲ್ಲ. ಚುನಾವಣಾ ಸಮಯ ಯಾಕೆ ಆಯ್ಕೆ ಮಾಡಿಕೊಳ್ಳುತ್ತೀರಿ. ಚುನಾವಣಾ ಸಂದರ್ಭದಲ್ಲಿ ಬೆಂಬಲಿಗರನ್ನು ಹೆದರಿಸುವ ವಾತಾವರಣ ಸೃಷ್ಟಿಸಬೇಡಿ. ಇದು ರೂಟಿನ್ ಕಾರ್ಯವಾಗಿದ್ದರೆ ಬಿಜೆಪಿಯವರ ಬಳಿ ದುಡ್ಡಿಲ್ಲವಾ?. ಯಡಿಯೂರಪ್ಪ 25 ಕೋಟಿ ಶಾಸಕರಿಗೆ ಆಫರ್ ಇಟ್ಟಿರಲಿಲ್ವಾ. ಈಶ್ವರಪ್ಪ ಮನೆ ನೋಟು ಎಣಿಸುವ ಯಂತ್ರ ಸಿಕ್ಕಲ್ವಾ? ಅವರ ಮನೆಗಳ ಮೇಲೆ ಯಾಕೆ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
Advertisement
ಇದು ನಮಗೆ ಭಯ ಅಲ್ಲ ನನ್ನ ಪ್ರಶ್ನೆ ಆಗಿದೆ. ಇಂತಹ ದಾಳಿಗಳಿಂದ ನಮ್ಮನ್ನು ಬೆಂಬಲಿಸುವವರು, ಸಹಾಯ ಮಾಡುವವರು ಹಿಂದೆ ಹೋಗ್ತಾರೆ. ಕಾರ್ಯಕರ್ತರು ಮುಖಂಡರು ಭಯದಿಂದ ಚುನಾವಣೆ ಹಿಂದೆ ಸರಿಯುತ್ತಾರೆ. ಹೀಗಾಗಿ ಇಂತಹ ದಾಳಿಗಳು ನಮಗೆ ಸ್ವಲ್ಪ ಪರಿಣಾಮ ಬಿರುತ್ತದೆ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಮೋದಿಯವರು ಇದನ್ನು ಪಾಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
Advertisement
ಮುದ್ದೇಹನುಮೇಗೌಡರು ತಮ್ಮ ನಾಮಪತ್ರವನ್ನು ವಾಪಸ್ ಪಡೆಯಲು ಒಪ್ಪಿಕೊಂಡಿದ್ದಾರೆ. ನಾನು ಅವರ ಜೊತೆ ಮಾತುಕತೆ ನಡೆಸಿದ್ದೇನೆ. ನಾಮಪತ್ರ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ನನ್ನ ಬಳಿ ಹೇಳಿದ್ದಾರೆ. ನಾನು ಅವರಿಗೆ ಏನೂ ಹೇಳಿಲ್ಲ. ಕಾಂಗ್ರೆಸ್ ಸಂಸದ ಆಗಿದ್ದೀರಿ. ನಿಮಗೆ ಅನ್ಯಾಯ ಆಗಿದೆ. ಮುಂದೆ ಆ ಅನ್ಯಾಯವನ್ನು ಸರಿಪಡಿಸಲು ಏನಾದರೂ ಮಾಡೋಣ ಎಂದು ಹೇಳಿದರು.
ನಾನು 28 ಕ್ಷೇತ್ರಗಳಿಗೂ ಹೋಗುತ್ತೇನೆ. ಜೆಡಿಎಸ್ ಅಭ್ಯರ್ಥಿ ಇರುವ ಕಡೆ ಹೋಗುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಇರುವ ಕಡೆಯೂ ಹೋಗುತ್ತೇನೆ. ನಾನು ಸ್ಟಾರ್ ಕಂಪೇನರ್. ಹಾಗಂತ ಸ್ಟಾರ್ ಎಂದರೆ ನಾನು ಹಣೆ ಮೇಲೆ ಸ್ಟಾರ್ ಹಾಕಿಕೊಳ್ಳಬೇಕೇ ಎಂದು ಪ್ರಶ್ನಿಸಿದರು.