ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶನೈಶ್ಚರ ಸ್ವಾಮಿ ದೇವಸ್ಥಾನವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಕನಕದಾಸದ ಪುತ್ಥಳಿಯನ್ನು ಅನಾವರಣ ಮಾಡಿದರು.
ಕಾರ್ಯಕ್ರಮದಲ್ಲಿ ದೇವರು ಹಾಗೂ ಧರ್ಮದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ದೇವರು ಒಬ್ಬನೇ ಇರೋದು, ಅನೇಕ ಇಲ್ಲ. ಆದರೆ ನಾವು ಬೇರೆ ಬೇರೆ ಹೆಸರಲ್ಲಿ ಕರೆದು ಪೂಜೆ ಮಾಡ್ತೀವಿ. ದೇವನೊಬ್ಬ ನಾಮ ಹಲವು, ದೇವರು ಸರ್ವವ್ಯಾಪಿ. ಗುಡಿಯಲ್ಲು ಇದ್ದಾನೆ, ಹೊರಗೂ ಇದ್ದಾನೆ. ಹಿರಣ್ಯ ಕಶ್ಯಪು ನಾಟಕ ನೋಡಿಲ್ವಾ? ಹಾಗೆಯೇ ಎಲ್ಲೆಲ್ಲೂ ಇದ್ದಾನೆ ಎಂದು ಹೇಳಿದರು.
ದೇವರು, ಒಳ್ಳೆದು, ಕೆಟ್ಟದರ ಬಗ್ಗೆ ಪಾಠ ಮಾಡಿದ ಸಿದ್ದರಾಮಯ್ಯ ಅವರು, ವ್ಯಾಸರಾಯ-ಕನಕದಾಸರ ಕಥೆ ಪ್ರಸ್ತಾಪಿಸಿದರು. ನಿಜವಾದ ಜ್ಞಾನ ಬೆಳೆಸಿಕೊಂಡವನು ಜ್ಞಾನಿ. ಯಾರಿಗೂ ಮೋಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ಅಲ್ಲದೇ ಇನ್ನೊಬ್ಬರಿಗೆ ಮೋಸ ಮಾಡದಿರೋದೆ ದೇವರು. ತಪ್ಪು ಮಾಡಿದರೆ ಶನಿ ಹೆಗಲೇರ್ತಾನೆ ಅನ್ನೋ ಭಯ. ಆದ್ದರಿಂದ ಎಲ್ಲರೂ ಶನೇಶ್ವರನಿಗೆ ಭಯ ಪಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರಿಗೆ ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಸಂಸದ ಆರ್. ಧ್ರುವನಾರಾಯಣ, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸಾಥ್ ನೀಡಿದರು. ಇದನ್ನು ಓದಿ: ಯಡಿಯೂರಪ್ಪನನ್ನು ನೋಡಿದ್ರೆ ನನಗೆ ಅಯ್ಯೋ ಪಾಪ ಅನ್ನಿಸುತ್ತೆ: ಸಿದ್ದರಾಮಯ್ಯ