– ಎರಡು ಯೋಜನೆಗಳು ಕಾಣಿಸ್ತಿಲ್ಲ
ಮೈಸೂರು: ಬಜೆಟ್ ಸಂಪೂರ್ಣವಾಗಿ ಓದಿಲ್ಲ. ಆದರೂ ಇದು ಓವರಾಲ್ ಗುಡ್ ಬಜೆಟ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಬಜೆಟ್ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ, ಬಜೆಟ್ ಪ್ರತಿಯನ್ನು ಓದಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ. ಕೃಷಿ ಭಾಗ್ಯ, ಕ್ಷೀರ ಭಾಗ್ಯ ಯೋಜನೆ ಮುಂದುವರಿದಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್, ರೈತ ಬೆಳಕು ಯೋಜನೆಗಳು ಬಜೆಟ್‍ನಲ್ಲಿ ಕಾಣಿಸುತ್ತಿಲ್ಲ. ಏನಾಗಿದೆ ಅಂತ ನೋಡುತ್ತೇನೆ ಎಂದು ತಿಳಿಸಿದರು.
ಆಡಿಯೋ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಕ್ಸ್‍ಪೋಸ್ ಆಗಿದ್ದಾರೆ. ನಾವು ಆಪರೇಷನ್ ಮಾಡುತ್ತಿಲ್ಲ. ಮೈತ್ರಿ ಸರ್ಕಾರದ ಶಾಸಕರಿಗೆ ಆಮಿಷ ಒಡ್ಡುತ್ತಿಲ್ಲ ಅಂತ ಹೇಳುತ್ತಿದ್ದರು. ಈಗ ಅವರ ಬಣ್ಣ ಬಯಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಆಡಿಯೋ ಮಿಮಿಕ್ರಿಯೆ ಅಂತ ಬಿ.ಎಸ್.ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ. ಇದಕ್ಕಿಂತ ನಗೆಪಾಟಲು ಇನ್ನೊಂದಿಲ್ಲ. ಅವರಂತಹ ಬಂಡರು ಯಾರು ಇಲ್ಲ ಎಂದು ನಗುತ್ತಲೇ ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv