ಬೆಂಗಳೂರು: ಸಿದ್ದರಾಮೋತ್ಸವಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಡಿಕೆ ಶಿವಕುಮಾರ್ ಗುರುವಾರದಿಂದ ಯೂ ಟರ್ನ್ ಹೊಡೆದಿದ್ದಾರೆ. ಸಿದ್ದರಾಮೋತ್ಸವ ಪಕ್ಷದ ವೇದಿಕೆಯಲ್ಲೇ ನಡೆಯುತ್ತಿರುವ ಕಾರ್ಯಕ್ರಮ ಎಂದ ಡಿಕೆಶಿ ಘೋಷಣೆ ಮಾಡಿದ್ದಾರೆ.
ಸಿದ್ದರಾಮೋತ್ಸವ ಸಂಪೂರ್ಣವಾಗಿ ಸಿದ್ದರಾಮಯ್ಯ ಮಯವಾಗಬೇಕು ಹೊರತು ಪಕ್ಷದ ನೆರಳಿರಬಾರದು ಎನ್ನುವುದು ಸಿದ್ದು ಬೆಂಬಲಿಗರ ಹಠ. ಈಗ ಪಕ್ಷವೇ ಜೊತೆಗಿದೆ ಎನ್ನುವ ಮೂಲಕ ಸಿದ್ದರಾಮೋತ್ಸವವನ್ನ ಕಾಂಗ್ರೆಸ್ ಉತ್ಸವ ಆಗಿಸಲು ಡಿಕೆಶಿ ಅಂಡ್ ಟೀಂ ಪ್ರಯತ್ನ ಮಾಡುತ್ತಿದೆ.
Advertisement
Advertisement
ಸಿದ್ದರಾಮಯ್ಯಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಎಂಬಂತೆ ಸಿದ್ದರಾಮಯ್ಯ ವಿರೋಧಿ ಬಣ ಮಾತನಾಡುತ್ತಿದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷರೇ ಇದು ಪಕ್ಷದ ವೇದಿಕೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಎನ್ನುವ ಮೂಲಕ ಸಿದ್ದರಾಮೋತ್ಸವ ಕಾಂಗ್ರೆಸ್ ಸಮಾವೇಶ ಎಂಬಂತೆ ಬಿಂಬಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಜೆಪಿ ನಡ್ಡಾ ಭೇಟಿ- ಬಿಜೆಪಿ ಸೇರ್ಪಡೆ?
Advertisement
ಪಕ್ಷದ ಒಳಗಡೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಮಧ್ಯೆ ಡಿಕೆಶಿಯನ್ನು ಸಿದ್ದರಾಮಯ್ಯ ಬೆಳಗಿನ ಉಪಹಾರಕ್ಕೆ ಆಹ್ವಾನಿಸಿದ್ದಾರೆ. ಈ ಮೂಲಕ ಸಿದ್ದರಾಮೋತ್ಸವವನ್ನು ಪಕ್ಷದ ಸಮಾವೇಶವಾಗಿ ಬಿಂಬಿಸಲು ಹೊರಟ ಡಿಕೆಶಿಯನ್ನ ವಿಶ್ವಾಸದ ದಾಳದ ಮೂಲಕ ಕಟ್ಟಿ ಹಾಕಲು ಸಿದ್ದರಾಮಯ್ಯ ಪ್ರಯತ್ನ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.