– ರಾಮಾಂಜನೇಯ ಯುದ್ಧವೇ ಆಗಿದೆ, ನಮ್ಮಲ್ಲಿ ಯುದ್ಧ ಆಗಲ್ವಾ ಎಂದ ಮಾಜಿ ಸಿಎಂ
ಬೆಂಗಳೂರು: ಸಮಯ ಬಂದಾಗ ಸುಮಲತಾ ಅಂಬರೀಶ್ (Sumalatha) ಜೊತೆಗೂ ಮಾತುಕತೆ ನಡೆಸುತ್ತೇನೆ. ರಾಮಾಂಜನೇಯ ಯುದ್ದವೇ ನಡೆದು ಹೋಗಿದೆ. ನಮ್ಮಲ್ಲಿ ಯುದ್ದ ಆಗೊಲ್ಲವಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಮಾತನಾಡಿದರು.
Advertisement
ನಾರಾಯಣಗೌಡರಂತೆ ಸುಮಲತಾ ಜೊತೆಯೂ ಮಾತುಕತೆ ನಡೆಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ಸುಮಲತಾ ಅಂಬರೀಶ್ ಜೊತೆಗೆ ಮಾತುಕತೆಗೆ ಸಿದ್ದ ಎಂದು ಸಂದೇಶ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಮುನಿಯಪ್ಪ ಅಳಿಯನಿಗೆ ಕೋಲಾರ ಟಿಕೆಟ್ ಕೊಟ್ಟರೆ ರಾಜೀನಾಮೆ – ‘ಕೈ’ ಎಂಎಲ್‌ಸಿ, ಶಾಸಕರಿಂದ ಬೆದರಿಕೆ
Advertisement
Advertisement
ಸುಮಲತಾ ಅವರ ಜೊತೆಗೆ ಮಾತುಕತೆ ಮಾಡ್ತೀನಿ. ಎಲ್ಲವೂ ಸುಗಮವಾಗಿ ನಡೆಯುತ್ತದೆ. ಸುಮಲತಾ ನನಗೆ ಶತ್ರು ಅಲ್ಲ. ಚುನಾವಣೆಗಳು ಬಂದಾಗ ಕೆಲವು ವಿಚಾರದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬಂದಿರುತ್ತವೆ. ಆ ಸಂದರ್ಭದಲ್ಲಿ ಹಲವಾರು ರೀತಿ ಚರ್ಚೆಗಳು ಆಗಿರುತ್ತದೆ. ಅದನ್ನ ಈಗ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
Advertisement
ಅಂಬರೀಶ್ ಅವರು ಬದುಕಿದ್ದಾಗ ಜೊತೆಗೂಡಿಯೇ ಊಟ ಮಾಡಿದ್ದೇವೆ. ಸುಮಲತಾ ಅವರೇ ನನಗೆ ಊಟ ಬಡಿಸಿದ್ದಾರೆ. ಅಂಬರೀಶ್ ಜೊತೆ ಊಟ ಮಾಡೋವಾಗ ಜೊತೆಯಲ್ಲಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ. ಆ ದಿನಗಳು ಇವೆ ಎಂದು ನೆನಪು ಮೆಲುಕು ಹಾಕಿದರು. ಇದನ್ನೂ ಓದಿ: ಜೆಪಿ ನಡ್ಡಾ ಭೇಟಿ ಮಾಡಿ ಚರ್ಚಿಸಿದ ನಟಿ ಕಂಗನಾ
ರಾಜಕೀಯದಲ್ಲಿ ಕೆಲವು ಸನ್ನಿವೇಶಗಳಲ್ಲಿ ಇಂತಹ ಸಂಘರ್ಷಗಳು ಆಗಿರುತ್ತವೆ. ರಾಮಾಂಜನೇಯ ಯುದ್ದವೇ ಆಗಿ ಹೋಗಿದೆ. ಇನ್ನು ನಾವು ಹುಲು ಮಾನವರು. ನಮ್ಮಲ್ಲಿ ಯುದ್ದ ಆಗದೇ ಇರುತ್ತದೆಯಾ? ದೊಡ್ಡ ಮಟ್ಟದಲ್ಲಿ ಅದನ್ನೇ ಸಾಧಿಸಿಕೊಂಡು ಹೋಗೋ ಅವಶ್ಯಕತೆ ಇಲ್ಲ. ಸಮಯ ಬಂದಾಗ ಸುಮಲತಾ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.