– ಹೈದ್ರಾಬಾದ್‍ನಲ್ಲಿ ಐಟಿ ದಾಳಿ, ಕರ್ನಾಟಕದಲ್ಲಿ ನಡುಕ
– ಸಿದ್ದರಾಮಯ್ಯಗೆ ಐಟಿ ನೋಟಿಸ್ ಸಾಧ್ಯತೆ
– ಪಬ್ಲಿಕ್ ಟಿವಿಯಲ್ಲಿ ‘ಮೇಘಾ’ ಇನ್‍ವೆಸ್ಟಿಗೇಷನ್ ಸ್ಟೋರಿ
ಬೆಂಗಳೂರು: ಹೈದರಾಬಾದಿನಲ್ಲಿ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಿದ್ದು ಈಗ ಈ ‘ಮೇಘಾ’ ಟೆಂಡರ್ ಪ್ರಕರಣ ಕರ್ನಾಟಕದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ.
ಹೌದು, ಆಂಧ್ರ ಮೂಲದ ಮೇಘಾ ಕಂಪನಿಯಿಂದ ಹವಾಲಾ ಹಣ ಸ್ವೀಕಾರ ಸಂಬಂಧ ಎಐಸಿಸಿಗೆ ಐಟಿ ಇಲಾಖೆ ನೋಟಿಸ್ ಕೊಟ್ಟಿದ್ದು ತನಿಖೆ ತೀವ್ರಗೊಂಡಿದೆ. ಆಂಧ್ರದ ಗುತ್ತಿಗೆದಾರ ಕೃಷ್ಣಾರೆಡ್ಡಿ ಮನೆ ಮೇಲೆ ದಾಳಿ ವೇಳೆ ಪತ್ತೆಯಾದ ಡೈರಿಯ ಪ್ರಕಾರ ಎಐಸಿಸಿಗೆ 170 ಕೋಟಿ ನೀಡಲಾಗಿದೆ. ಈ ಡೈರಿ ಆಧರಿಸಿ ಎಐಸಿಸಿಗೆ ಐಟಿ ನೋಟಿಸ್ ನೀಡಿದೆ.
Advertisement
Advertisement
ಐಟಿ ನೋಟಿಸ್ ಕೊಡುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್ ನಾಯಕರಿಗೂ ನಡುಕ ಶುರುವಾಗಿದೆ. ಯಾಕೆಂದರೆ ಗುತ್ತಿಗೆದಾರ ಕೃಷ್ಣಾರೆಡ್ಡಿಗೆ ಅತಿ ಹೆಚ್ಚು ಟೆಂಡರ್ ನೀಡಿದ್ದೇ ಕರ್ನಾಟಕ. ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತಿ ಹೆಚ್ಚು ಟೆಂಡರ್ ನೀಡಲಾಗಿತ್ತು. ಸರಿಸುಮಾರು 8 ಸಾವಿರ ಕೋಟಿಯ ಬೃಹತ್ ಟೆಂಡರ್ ನೀಡಲಾಗಿತ್ತು.
Advertisement
ಈ ಟೆಂಡರ್ ಗಾಗಿಯೇ ಎಐಸಿಸಿಗೆ ಕಿಕ್‍ಬ್ಯಾಕ್ ನೀಡಲಾಗಿತ್ತಾ? ಎಐಸಿಸಿಗೆ ರವಾನೆಯಾದ 170 ಕೋಟಿಗೆ ಕರ್ನಾಟಕದ ನಂಟಿತ್ತಾ ಎಂಬ ಪ್ರಶ್ನೆಗಳ ಆಧಾರದ ಮೇಲೆ ಕರ್ನಾಟಕ ನಂಟಿನ ಬಗ್ಗೆ ಐಟಿಯಿಂದ ತೀವ್ರಗೊಂಡಿದೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯಗೆ ಯಾವುದೇ ಕ್ಷಣದಲ್ಲೂ ಐಟಿ ನೋಟಿಸ್ ನೀಡುವ ಸಂಭವ ಇದೆ. ಟೆಂಡರ್ ನೀಡಿದ ಸಿದ್ದರಾಮಯ್ಯಗೂ ಐಟಿ ಸಂಕಷ್ಟ ಎದುರಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
Advertisement
ಯಾವೆಲ್ಲ ಟೆಂಡರ್ ನೀಡಲಾಗಿದೆ?
ಸಿದ್ದರಾಮಯ್ಯ ಅವಧಿಯಲ್ಲಿ 2000 ಕೋಟಿ ರೂಪಾಯಿಯ ಎತ್ತಿನ ಹೊಳೆ ಯೋಜನೆ, 1300 ಕೋಟಿ ರೂಪಾಯಿಯ ಕೆ ಸಿ ವ್ಯಾಲಿ ಪೈಪ್‍ಲೈನ್ ಯೋಜನೆ, 900 ಕೋಟಿ ರೂಪಾಯಿಯ ಹುನಗುಂದದ ಏತ ನೀರಾವರಿ ಯೋಜನೆ, 600 ಕೋಟಿ ರೂ. ಕೊಪ್ಪಳ ರಾಯಚೂರು ನೀರಾವರಿ ಯೋಜನೆ, 600 ಕೋಟಿ ರೂಪಾಯಿಯ ಕೃಷ್ಣ ಜಲಭಾಗ್ಯ ನಿಗಮದ ಯೋಜನೆ, ಪಾವಗಡದ ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣದ ಟೆಂಡರ್ ನೀಡಲಾಗಿದೆ.