ಬೆಂಗಳೂರು: ಪೆನ್‍ಡ್ರೈವ್ ಇಟ್ಟುಕೊಂಡು ಡಿಕೆ ಶಿವಕುಮಾರ್ (DK Shivakumar) ಅವರಿಗೆ ಒಕ್ಕಲಿಗ ನಾಯಕನಾಗುವ ಬಯಕೆ ಎಂಬ ಹೆಚ್‍ಡಿಕೆ (HD Kumaraswamy) ಹೇಳಿಕೆಗೆ ಡಿಸಿಎಂ ಕಿಡಿಕಾರಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 7 ಬಳಿಕ ಪ್ರಜ್ವಲ್ ರೇವಣ್ಣ ಪ್ರಕರಣ ಏನಾಗುತ್ತೆ ನೋಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಓ ಸ್ವಾಮೀ ಮೇ 7 ಅಲ್ಲ, ಟೈಂ ಯಾಕೆ ವೇಸ್ಟ್ ಮಾಡ್ಬೇಕು, 7ನೇ ತಾರೀಖಿನವರೆಗೆ ಯಾಕೆ ಬೇಕು? ನಾವೂ ಬಿಚ್ಚಬೇಕಾ? ನಾವು ಯಾರು ಯಾರು ಎಲ್ಲಿ ಇದರ ಮೂಲವೇನು ಯಾರೇನು, ಯಾರ ಹಿನ್ನೆಲೆ ಏನು, ಎತ್ತ ಅಂತ ಬಿಚ್ಚಬೇಕಾ ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.
Advertisement
Advertisement
ಯಾವುದೋ ಒಂದು ಪೇಪರ್ ನಲ್ಲಿ ಬರೆದಿದ್ದರು, ಇದಕ್ಕೆ ಯಾರು ಕಾರಣ ಅಂತ ಅವರ ಫ್ಯಾಮಿಲಿಯವರ ಇಂಟರ್ನಲ್ ಇಶ್ಯೂ. ಉಪ್ಪು ತಿಂದವರು ನೀರು ಕುಡಿಯಬೇಕು ಅಂತ ಹೇಳಿದ್ದು ನಾವಾ..? ಯಾಕೆ ಸ್ಟಾಂಡ್ ಬದಲಾವಣೆ ಮಾಡ್ತೀರಾ..? ಅವರ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ ಅಂದ್ರು ಟಿಕೆಟ್ ಕೊಡಬಾರದು ಅಂತ ಹೇಳಿದ್ರು. ನಮ್ಮ ಫ್ಯಾಮಿಲಿಯಲ್ಲಿ ಯಾರನ್ನೂ ನಿಲ್ಲಿಸಲ್ಲ ಅಂದ್ರು. ತಪ್ಪಾಯ್ತು ಕ್ಷಮಿಸಿ ಅಂದ್ರು ಇದು ಫ್ಯಾಮಿಲಿ ಇಂಟರ್ನಲ್ ಇಶ್ಯೂ ಎಂದರು. ಇದನ್ನೂ ಓದಿ: ಪ್ರಜ್ವಲ್ ಅಂತಹ ಸ್ವಭಾವದ ಹುಡುಗ ಅಲ್ಲ: ಜಿ.ಎಸ್ ಬಸವರಾಜ್
Advertisement
Advertisement
ಯಾರ್ ಯಾರೋ ಏನೇನೋ ನ್ಯೂಸ್ ಕ್ರಿಯೆಟ್ ಮಾಡ್ತಿದ್ದಾರೆ, ಅವರು ಹತಾಶರಾಗಿದ್ದಾರೆ ಪಬ್ಲಿಕ್ ನಲ್ಲಿ ಮಾತನಾಡ್ತಿದ್ದಾರೆ. ಆದರೆ ಇಂಟರ್ನಲ್ ಪ್ರಾಬ್ಲಂ ನಮಗೆ ಗೊತ್ತು. ಯಾರು ಯಾರು ಏನು ಹೇಳಿಕೆ ಕೊಟ್ಟಿದ್ದಾರೆ ಅಂತ ಚರ್ಚೆ ಮಾಡೊಲ್ಲ. ಅವರ ಫ್ಯಾಮಿಲಿಯಲ್ಲಿ ಏನೇನು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ ಅಂತ ಗಮನಿಸಿದ್ದೀರಾ.? ಪಾರ್ಲಿಮೆಂಟ್ ಮತ್ತು ಅಸೆಂಬ್ಲಿ ಚುನಾವಣೆಯಲ್ಲಿ ಏನೇನು ಹೇಳಿಕೆ ಕೊಟ್ಟಿದ್ದಾರೆ ಗೊತ್ತಿದೆ, ಅದಕ್ಕೆ ನಾನು ಎಂಟ್ರಿ ಆಗಲ್ಲ ಎಂದಿದ್ದಾರೆ.