ರಾಂಚಿ: ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತವರಿನ ರಾಂಚಿಯ ಜೆಎಸ್‍ಸಿಎ ಕ್ರೀಡಾಂಗಣದಲ್ಲಿ ನೆಟ್ ಅಭ್ಯಾಸ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
2019ರ ವಿಶ್ವಕಪ್ ಟೂರ್ನಿ ನಂತರ ಎಂ.ಎಸ್.ಧೋನಿ ಮೈದಾನದಲ್ಲಿ ಈ ರೀತಿ ಕಾಣಿಸಿದ್ದು ಇದೇ ಮೊದಲು. ಆದರೆ ಧೋನಿ ಮುಂದಿನ ತಿಂಗಳು ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಸರಣಿಗೆ ಅಲಭ್ಯವಾಗಲಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಎಂ.ಎಸ್.ಧೋನಿ ವೆಸ್ಟ್ ಇಂಡೀಸ್ ಸರಣಿಗೆ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 6ರಂದು ಮುಂಬೈನಲ್ಲಿ ನಡೆಯಲಿದೆ. ಇದನ್ನೂ ಓದಿ: ಅಪ್ಪನಿಗೆ ಮಸಾಜ್ ಮಾಡಿದ ಧೋನಿ ಪುತ್ರಿ ಝೀವಾ: ವಿಡಿಯೋ
Advertisement
Advertisement
ಧೋನಿ ತಮ್ಮ ಕೊನೆಯ ಪಂದ್ಯವನ್ನು 2019ರ ಜುಲೈನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಅಂದಿನಿಂದ ಅವರು ಕ್ರಿಕೆಟ್‍ನಿಂದ ದೂರ ಉಳಿದಿದ್ದರು. ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಸೀಮಿತ ಓವರ್‌ಗಳ ಸರಣಿ ಆಡಿತು. ಆದರೆ ಧೋನಿ ಈ ಯಾವುದೇ ಸರಣಿಗೆ ತಂಡದಲ್ಲಿ ಸೇರ್ಪಡೆಯಾಗಿಲ್ಲ. ಸುಮಾರು ಆರು ತಿಂಗಳ ನಂತರ, ಧೋನಿ ಮೈದಾನದಲ್ಲಿ ಅಭ್ಯಾಸ ಮಾಡುವುದನ್ನು ನೋಡಿ ಕ್ರಿಕೆಟ್ ಅಭಿಮಾನಿಗಳು ಸಹ ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ನಂತ್ರ ಅತೀ ಹೆಚ್ಚು ಜನ ಮೆಚ್ಚುಗೆ ಪಡೆದ ವ್ಯಕ್ತಿ ಧೋನಿ
Advertisement
.@msdhoni’s first net session after a long long break.
Retweet if you can’t wait to see him back!????????#Dhoni #MSDhoni #Ranchi #JSCA pic.twitter.com/2X6kbQNYMG
— MS Dhoni Fans Official (@msdfansofficial) November 15, 2019
Advertisement
ವಿಶ್ವಕಪ್ ಟೂರ್ನಿ ನಂತರ ಧೋನಿಯ ಭವಿಷ್ಯದ ಬಗ್ಗೆ ಸಾಕಷ್ಟು ಉಹಾಪೋಹಗಳು ಕೇಳಿ ಬಂದಿವೆ. ಧೋನಿ ನಿವೃತ್ತಿಯಂತಹ ವದಂತಿಗಳು ಸಹ ಅನೇಕ ಬಾರಿ ಹರಿದಾಡಿತ್ತು. ಆದರೆ ಧೋನಿ ಮಾತ್ರ ಇದು ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಧೋನಿ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಪತ್ನಿ ಸಾಕ್ಷಿ
ಧೋನಿ ನೆಟ್‍ನಲ್ಲಿ ಅಭ್ಯಾಸ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡ ಅಭಿಮಾನಿಗಳೊಬ್ಬರು, ‘ಎಂಎಸ್ ಧೋನಿ ಅವರ ಸುದೀರ್ಘ ಸಮಯದ ಬಳಿಕ ನೆಟ್ ಅಭ್ಯಾಸ ಮಾಡಿದ್ದಾರೆ. ನೀವು ಅವರನ್ನು ಮತ್ತೆ ಮೈದಾನದಲ್ಲಿ ನೋಡಲು ಕಾಯುತ್ತಿದ್ದರೆ ಇದನ್ನು ರಿಟ್ವೀಟ್ ಮಾಡಿ’ ಎಂದು ಬರೆದಿದ್ದಾರೆ.