Thursday, 27th February 2020

ಧೋನಿ ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಪತ್ನಿ ಸಾಕ್ಷಿ

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ನಿವೃತ್ತಿ ನೀಡುತ್ತಾರೆ ಎಂಬ ಉಹಾಪೋಹಗಳಿಗೆ ಪತ್ನಿ ಸಾಕ್ಷಿ ಧೋನಿ ಸ್ಪಷ್ಟನೆ ನೀಡಿದ್ದಾರೆ.

2016ರ ಟ್ವೆಂಟಿ-20 ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಫೋಟೋವನ್ನು ಟ್ವೀಟ್ ಮಾಡಿದ್ದ ವಿರಾಟ್ ಕೊಹ್ಲಿ, ಇದು ನಾನು ಎಂದಿಗೂ ಮರೆಯಲಾಗದ ಪಂದ್ಯ. ಅದು ವಿಶೇಷ ರಾತ್ರಿ. ಈ ವ್ಯಕ್ತಿ, ಫಿಟ್‍ನೆಸ್ ಟೆಸ್ಟ್‍ಗೆ ಓಡುವಂತೆ ನನ್ನನ್ನು ಓಡಿಸಿದರು ಎಂದು ಧೋನಿ ಬಗ್ಗೆ ಬರೆದುಕೊಂಡಿದ್ದಾರೆ. ಹೀಗಾಗಿ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು.

ಈ ವಿಚಾರವಾಗಿ ಟ್ವೀಟ್ ಮಾಡಿವ ನೀಡಿರು ಸಾಕ್ಷಿ ಧೋನಿ ಅವರು, ಇದನ್ನು ವದಂತಿ ಅಂತ ಕರೆಯಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಮಾಂಡೋ ಲುಕ್‍ನಲ್ಲಿ ಧೋನಿ ಮಿಂಚಿಂಗ್ 

ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಅವರು, ಇಂತಹ ಬೆಳವಣಿಗೆಯ ಬಗ್ಗೆ ಬಿಸಿಸಿಐಗೆ ಯಾವುದೇ ಮಾಹಹಿತಿ ಲಭಿಸಿಲ್ಲ. ಇದು ಗಾಳಿ ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಧೋನಿಯನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಹಿಂದಿಕ್ಕಿದ ಪಂತ್ 

ಭಾರತದಲ್ಲಿ ಸೆಪ್ಟೆಂಬರ್ 15ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆದಿದೆ. ಈ ಪಂದ್ಯದಲ್ಲೂ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶ್ರಾಂತಿ ನೀಡಿ, ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಬ್ ಪಂತ್ ಅವರನ್ನು ಮುಂದುವರಿಸಲಾಗಿದೆ.

Leave a Reply

Your email address will not be published. Required fields are marked *