ದಾವಣಗೆರೆ: ರೈಲಿನಲ್ಲಿ ಮರೆತು ಹೋಗಿದ್ದ ಸುಮಾರು 7.31 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ರೈಲ್ವೇ ಭದ್ರತಾ ಪಡೆ ಸಿಬ್ಬಂದಿಗಳು ಬ್ಯಾಗ್‍ನ ವಾರಸುದಾರರಿಗೆ ವಾಪಸ್ಸು ನೀಡಿ ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಘಟನೆ ಜರುಗಿದ್ದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ನಿವಾಸಿ ಶ್ರೀನಿವಾಸ್‍ರಾಜ್‍ರವರು ಮೈಸೂರು – ಸೊಲ್ಲಾಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಬ್ಯಾಗ್ ಬಿಟ್ಟು ಬಂದಿದ್ದರು. ಬಳಿಕ ನೆನಪಾಗಿ ತಕ್ಷಣ ಬ್ಯಾಗ್ ಬಗ್ಗೆ ರೈಲ್ವೇ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಶೋಧ ನಡೆಸಿದ ಸಿಬ್ಬಂದಿ ಬ್ಯಾಗ್‍ನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಶ್ರೀನಿವಾಸ್ ರಾಜ್‍ಗೆ ತಲುಪಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ಗೆ ಸಮಸ್ಯೆ ಆಗಲ್ಲ, ದೇಶದಲ್ಲಿ ಕಲ್ಲಿದ್ದಲು ದಾಸ್ತಾನಿದೆ- ಪ್ರಹ್ಲಾದ್ ಜೋಷಿ ಸ್ಪಷ್ಟನೆ
ಶ್ರೀನಿವಾಸ್ ರಾಜ್‍ರವರಿಗೆ ಸೇರಿದ ಬ್ಯಾಗ್‍ನಲ್ಲಿ 164 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ, ಒಂದು ಮೊಬೈಲ್ ಸೇರಿ ಸುಮಾರು 7.31 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಪತ್ತೆಯಾಗಿತ್ತು. ರೈಲ್ವೇ ಪೊಲೀಸ್ ಭದ್ರತಾ ಪಡೆ ಸಿಬ್ಬಂದಿ ಶ್ರೀನಿವಾಸ್ ರಾಜ್‍ರ ವಸ್ತುಗಳನ್ನು ಮಾಹಿತಿ ನೀಡಿದ ತಕ್ಷಣವೇ ಪತ್ತೆ ಹಚ್ಚಿ ಶ್ರೀನಿವಾಸ್ ರಾಜ್‍ಗೆ ತಲುಪಿಸಿದ್ದು ಎಲ್ಲಿಲ್ಲದ ಸಂತಸಕ್ಕೆ ಕಾರಣವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 406 ಕೇಸ್- ಬೆಂಗಳೂರಿನಲ್ಲಿ 156 ಪ್ರಕರಣ, 5 ಸಾವು