ಚಿಕ್ಕಮಗಳೂರು: ಅಂದು ರೈತರ ಮೇಲೆ ಜೀಪ್ ಹತ್ತಿಸೋಕೆ ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಇಂದು ಮತ್ತೆ ತಮ್ಮ ರಾಕ್ಷಸ ಪ್ರವೃತ್ತಿ ಮೆರೆದಿದ್ದಾರೆ.
ಚಿಕ್ಕಮಗಳೂರಿನ ತರಿಕೆರೆ ತಾಲೂಕಿನ ಎಂಸಿ.ಹಳ್ಳಿಯ ಸರ್ವೆ ನಂಬರ್ 4ರಲ್ಲಿ 438 ಎಕರೆ ಜಾಗಕ್ಕೆ ನಾಲ್ಕು ದಶಕಗಳಿಂದ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಇದನ್ನೂ ಓದಿ: ಹೊಲಕ್ಕೆ ನುಗ್ಗಿ ಅರಣ್ಯಾಧಿಕಾರಿಗಳ ಆಟಾಟೋಪ – ರೈತ ಮಹಿಳೆಯರ ಮೇಲೆ ಜೀಪ್ ಹತ್ತಿಸಲು ಯತ್ನ
Advertisement
Advertisement
ಈಗ ಮತ್ತೆ ಈ ಅರಣ್ಯಾಧಿಕಾರಿಗಳು ರಾತ್ರೋರಾತ್ರಿ ರೈತರ ತೆಂಗಿನ ಮರಗಳನ್ನು ಕಡಿದು ಹಾಕಿ, ಅವರನ್ನ ಬಂಧಿಸಿ ಮನಸ್ಸೋ ಇಚ್ಛೆ ಮೈಮೇಲೆ ಬಾಸುಂಡೆ ಬರೋ ರೀತಿ ಥಳಿಸಿದ್ದಾರೆ. ಅರಣ್ಯ ಇಲಾಖೆ ಕಂದಾಯ ಭೂಮಿಗೆ ಬೇಲಿ ಹಾಕೋಕೆ ರೈತರ ಮೇಲೆ ದರ್ಪ ತೋರ್ತಿದ್ದಾರೆ. ಇದ್ರಿಂದ ರೋಸಿ ಹೋಗಿರೋ ರೈತರು, ಕೂಡಲೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಮಧ್ಯ ಪ್ರವೇಶಸಿ ಈ ಜಾಗ ಯಾರದ್ದೆಂದು ಸ್ಪಷ್ಟಪಡಿಸಲಿ, ಇಲ್ಲವಾದ್ರೆ ನಮಗೆ ಇಚ್ಛಾಮರಣಕ್ಕೆ ಅನುಮತಿ ನೀಡಿಲಿ ಎಂದು ಆಗ್ರಹಿಸಿದ್ದಾರೆ.
Advertisement
ಸದ್ಯ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ.