ಬೆಂಗಳೂರು: ಮೈಸೂರು (Mysuru), ಬೆಳಗಾವಿ (Belagavi) ಬಳಿಕ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಚಿರತೆ (Leopard) ಆತಂಕ ಮನೆಮಾಡಿದೆ. ಇದೀಗ ನಗರ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದೆ.
Advertisement
ಬೆಂಗಳೂರಿನ ಉತ್ತರ ಹಳ್ಳಿ ಮುಖ್ಯ ರಸ್ತೆಯ ಕೋಡಿಪಾಳ್ಯದಲ್ಲಿ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿ ತಿಂದಿದೆ. ತುರಹಳ್ಳಿ ಫಾರೆಸ್ಟ್ ಅಂಚಿನ ಕೋಡಿಪಾಳ್ಯದ ಬಿಜಿಎಸ್ ಆಸ್ಪತ್ರೆ (Hospital) ಹಿಂಬದಿಯ ಗೇಟ್ ಬಳಿ ಚಿರತೆ, ಜಿಂಕೆಯನ್ನು ಬೇಟೆಯಾಡಿ ತಿಂದು ಹೋಗಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಹೆಲ್ಮೆಟ್ ಇಲ್ಲದೇ ತ್ರಿಬಲ್ ರೈಡಿಂಗ್ ಬಂದ ಮಹಿಳಾ ಪೊಲೀಸರು – ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಮಹಿಳೆ
Advertisement
Advertisement
ಕಳೆದ ಕೆಲವು ದಿನಗಳಿಂದ ಕೋಡಿಪಾಳ್ಯ ಸುತ್ತಮುತ್ತ ಚಿರತೆ ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು. ಇಂದು ಬೆಳಗ್ಗಿನ ಜಾವ ರಸ್ತೆ ಪಕ್ಕದಲ್ಲೇ ಜಿಂಕೆಯನ್ನು ಚಿರತೆ ಬೇಟೆಯಾಡಿದೆ. ಸಾರ್ವಜನಿಕರು ಹೇಳುವ ಪ್ರಕಾರ ಈ ಪ್ರದೇಶದಲ್ಲಿ ಒಟ್ಟು 4 ಚಿರತೆಗಳು ಓಡಾಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ವಾಕಿಂಗ್ ಮತ್ತು ಮುಖ್ಯ ರಸ್ತೆಗೆ ಹೋಗಲು ಈ ರಸ್ತೆಯನ್ನು ಬಳಸುತಿದ್ದು, ಈ ನಡುವೆ ಇದೇ ರಸ್ತೆಯಲ್ಲಿ ಒಟ್ಟು 5 ಶಾಲೆಗಳಿವೆ (Schools). ಹಾಗಾಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಭಯಬೀತರಾಗಿದ್ದಾರೆ. ಇನ್ನೊಂದೆಡೆ ಅರಣ್ಯ ಇಲಾಖೆ ಬೋನ್ ಇಟ್ಟು ಚಿರತೆ ಸೇರೆಗಾಗಿ ಕಾಯುತ್ತಿದ್ದಾರೆ. ಇತ್ತ ಸುರಕ್ಷತೆ ಇಲ್ಲದೇ ಜನರು ಪರದಾಡುವಂತಾಗಿದೆ. ಇದನ್ನೂ ಓದಿ: ನಾಗ ಯಾರು, ತಿಮ್ಮ ಯಾರು, ಬೊಮ್ಮಾ ಯಾರು ನನಗೆ ಗೊತ್ತಿಲ್ಲ: ಸೋಮಣ್ಣ ಸ್ಪಷ್ಟನೆ