ಮಡಿಕೇರಿ: ಅರಣ್ಯ ಇಲಾಖೆಯಲ್ಲಿ (Forest Department) ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರು (Woman Officer) ನೇಣಿಗೆ ಶರಣಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಂಡ್ಯ ಮೂಲದ ರಶ್ಮಿ (27) ಮೃತ ದುರ್ದೈವಿ. ಅರಣ್ಯ ಇಲಾಖೆಯ ಸಂಶೋಧನೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ರಶ್ಮಿ, ಕಳೆದ 2 ವರ್ಷಗಳಿಂದ ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
Advertisement
ನಿನ್ನೆ ರಾತ್ರಿ ಮಡಿಕೇರಿಯ ಅರಣ್ಯ ಭವನದ ಬಳಿಯಿರುವ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಅದಾನಿ ಷೇರು ಶಾರ್ಟ್ ಸೆಲ್ಲಿಂಗ್, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?
Advertisement
Advertisement
ಅಧಿಕಾರಿಯ ಅಗಲಿಕೆಗೆ ಮಡಿಕೇರಿಯ ಅರಣ್ಯ ಇಲಾಖೆ ಸಂತಾಪ ವ್ಯಕ್ತಪಡಿಸಿದೆ. ಮೃತದೇಹವನ್ನ ಮಂಡ್ಯ ಜಿಲ್ಲೆಗೆ ರವಾನಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ INDIA ಒಕ್ಕೂಟದ 3ನೇ ಸಭೆ – ‘ಬಿಜೆಪಿ ಚಲೇ ಜಾವೋ’ ಅಭಿಯಾನಕ್ಕೆ ಚಾಲನೆ ನಿರೀಕ್ಷೆ
Advertisement
Web Stories