ಮೈಸೂರು: ಇಂದು ರಾಜ್ಯದೆಲ್ಲೆಡೆ ಸಡಗರ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅದರಲ್ಲೂ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಮಕರ ಸಂಕ್ರಾಂತಿ ಸಂಭ್ರಮದಲ್ಲಿ ವಿದೇಶಿಗರು ಭಾಗಿಯಾಗಿದ್ದು ವಿಶೇಷವಾಗಿತ್ತು.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಗೋಪೂಜೆ ಮಾಡುವ ಮೂಲಕ ಸಂಕ್ರಾಂತಿ ಆಚರಿಸಲಾಯಿತು. ವಿದೇಶಿಗರು ಭಾರತೀಯ ಸಂಪ್ರದಾಯದಂತೆ ಗೋಪೂಜೆ ಮಾಡಿ ಗೋಮಾತೆ ನಮಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಗೋವುಗಳಿಗೆ ಪೂಜೆ ಮಾಡಿ ಫಲತಾಂಬುಲ ಕೂಡ ನೀಡಿದರು. ಜೊತೆಗೆ ಭತ್ತದ ರಾಶಿ, ನೇಗಿಲು, ಎತ್ತಿನ ಗಾಡಿ ಪರಿಕರಗಳಿಗೂ ಪೂಜೆ ಸಲ್ಲಿಸಿದರು.
Advertisement
Advertisement
ಭಾರತೀಯ ಗೋಪರಿವಾರ ಸಂಘ ಹಾಗೂ ಹನುಮ ಜಯಂತೋತ್ಸವ ಸಮಿತಿಯಿಂದ ಈ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದೇಶಿಗರು ಸಂತಸ ವ್ಯಕ್ತಪಡಿಸಿದರು.