ತುಮಕೂರು: ಪೊಲೀಸರ (Police) ಮೇಲೆ ವಿದೇಶಿ ಮಹಿಳೆಯರು ಹಲ್ಲೆ ನಡೆಸಿದ ಘಟನೆ ತುಮಕೂರಿನ (Tumkur) ನಿರಾಶ್ರಿತ ಕೇಂದ್ರದಲ್ಲಿ (Foreigners Refugee Centre) ನಡೆದಿದೆ.
ತುಮಕೂರಿನ ದಿಬ್ಬೂರಿನ ನಿರಾಶ್ರಿತ ಕೇಂದ್ರದ ಸಿಬ್ಬಂದಿ ಹಾಗೂ ಇಬ್ಬರೂ ಪೊಲೀಸರ ಮೇಲೆ ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಪಿಎಸ್‍ಐ ಚಂದ್ರಕಲಾ, ಪಿಸಿ ತಾಸೀನಾ ಬಾನು ಹಾಗೂ ನಿರಾಶ್ರಿತ ಕೇಂದ್ರದ ಡ್ರೈವರ್ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮೀ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 5 ಗ್ಯಾರಂಟಿ ಜಾರಿಗೆ ತೆರಿಗೆ ಏರಿಕೆ, 85ಸಾವಿರ ಕೋಟಿ ಸಾಲಕ್ಕೆ ನಿರ್ಧಾರ – ಯಾವ ತೆರಿಗೆ ಎಷ್ಟು ಏರಿಕೆ?
Advertisement
ಘಟನಾ ಸ್ಥಳಕ್ಕೆ ಎಸ್‍ಪಿ ರಾಹುಲ್ ಕುಮಾರ್ ಭೇಟಿ ನೀಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2 ತಿಂಗಳಿಂದ ತುಮಕೂರಿನಲ್ಲಿ ವಿದೇಶಿ ಪ್ರಜೆಗಳ ನಿರಾಶ್ರಿತರ ಕೇಂದ್ರ ತೆರೆಯಲಾಗಿದೆ. ಬೇರೆ ಬೇರೆ ಕಾರಣಗಳಿಂದ ಹಾಗೂ ವೀಸಾ ಮುಗಿದ ಹಿನ್ನೆಲೆಯಲ್ಲಿ ಅವರನ್ನ ಇಲ್ಲಿ ಕರೆತಂದು ಇರಿಸಲಾಗಿದೆ.
Advertisement
Advertisement
ಶುಕ್ರವಾರ ಸಂಜೆ ಪರಿಶೀಲನೆ ನಡೆಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಜೊತೆಗೆ ಇಲ್ಲಿಗೆ ಬಂದಿದ್ದಾರೆ. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೇಲೆ ಮಹಿಳೆಯರು ದಾಳಿ ಮಾಡಿದ್ದಾರೆ. ಜೊತೆಗೆ ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿರುವ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.
Advertisement
ಪಾಸ್‌ಪೋರ್ಟ್ ಅವಧಿ ಮುಗಿದ ಬಾಂಗ್ಲಾದೇಶ, ನೈಜೀರಿಯಾ ಸೇರಿದಂತೆ ಒಟ್ಟು 5 ದೇಶದ ಪ್ರಜೆಗಳು ನಿರಾಶ್ರಿತ ಕೇಂದ್ರದಲ್ಲಿದ್ದಾರೆ. ಒಟ್ಟು 27 ವಿದೇಶಿಗರಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತ: ಸಿಬಿಐನಿಂದ ಮೂವರು ಅರೆಸ್ಟ್
Web Stories