ಚಿಕ್ಕಮಗಳೂರು: ದಕ್ಷಿಣ ಕಾಶಿ ಕಳಸೇಶ್ವರ ದೇವಸ್ಥಾನಕ್ಕೆ (Kalaseshwara Temple) 19 ವಿದೇಶಿ ಭಕ್ತರು ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.
ರಷ್ಯಾದಿಂದ ಬಂದ ಪ್ರವಾಸಿಗರು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಧ್ಯಾನ ಮಾಡಿ, ಜಪ ಮಾಡಿದ್ದಾರೆ. ನಂತರ ದೇವಾಲಯದಲ್ಲಿ ಎಲ್ಲರಂತೆ ನೆಲದ ಮೇಲೆ ಕುಳಿತು ಪ್ರಸಾದ ಸ್ವೀಕರಿಸಿದ್ದಾರೆ. ವಿದೇಶಿಗರ ಭಕ್ತಿಯನ್ನು ಕಂಡು ಸ್ಥಳೀಯರು ಬೆರಗಾಗಿದ್ದಾರೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಕಳಸೇಶ್ವರ ದೇವಸ್ಥಾನ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕಳಸ ರಸ್ತೆಯಲ್ಲಿದೆ. ರಮಣೀಯವಾದ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿರುವ ಇದು ಕರ್ನಾಟಕದಲ್ಲಿನ ಜನಪ್ರಿಯ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.