ಮೈಸೂರು: ನಗರದಲ್ಲಿ ದೇಶದ ಆಂತರಿಕ ಭದ್ರತೆಯನ್ನೆ ಅಪಾಯಕ್ಕೆ ತಂದ್ದೊಡುವ ದಂಧೆ ನಡೆಯುತ್ತಿದೆ. ಪೊಲೀಸರ ಮುಂಜಾಗ್ರತಾ ಕ್ರಮದಿಂದ ವೀಸಾ ಅವಧಿ ವಿಸ್ತರಣಾ ದಂಧೆ ಬಯಲಾಗಿದೆ.
ವಿದ್ಯಾಭ್ಯಾಸಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳು ಅವಧಿ ಮುಗಿದ ಮೇಲೆಯೂ ಮೈಸೂರಿನಲ್ಲಿ ನೆಲೆಸಲು ಕಳ್ಳ ಮಾರ್ಗ ಹಿಡಿದಿದ್ದಾರೆ. ನಕಲಿ ಕೋರ್ಸ್ ಗೆ ಸೇರ್ಪಡೆ ಆಗಿ ಪ್ರವೇಶಾತಿ ದಾಖಲೆಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿ ಸಲೀಸಾಗಿ ತಮ್ಮ ವೀಸಾ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಅನೇಕ ವರ್ಷಗಳಿಂದ ಅಕ್ರಮವಾಗಿ ಮೈಸೂರಿನಲ್ಲಿ ಅನೇಕರು ವಾಸವಾಗಿದ್ದಾರೆ.
Advertisement
Advertisement
ಮೈಸೂರು ನಗರದಲ್ಲೇ 100ಕ್ಕೂ ಹೆಚ್ಚು ವಿದೇಶಿಗರು ಈ ರೀತಿ ಪೊಲೀಸ್ ಇಲಾಖೆಯನ್ನು ಯಾಮಾರಿಸಿ ಅಕ್ರಮವಾಗಿ ನೆಲೆಸಿದ್ದಾರೆ. ವಿದೇಶಿಗರಿಗೆ ಈ ರೀತಿ ಡಿಪ್ಲೋಮಾ ಕೋರ್ಸಿನ ನಕಲಿ ಪ್ರವೇಶಾತಿ ನೀಡಿರುವುದು ಮೈಸೂರಿನ ಕೆ.ಆರ್. ಮೊಹಲ್ಲಾದಲ್ಲಿನ ಶ್ರೀಕಾಂತ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಲ್ ಚಂದ್ರಬಾಬುನಾಯ್ಡು.
Advertisement
ನಕಲಿ ದಾಖಲೆ ಸೃಷ್ಠಿಸಿ ಹಾಗೂ ಅಕ್ರಮ ವಾಸದ ಆರೋಪದ ಮೇಲೆ ವಿದೇಶಿ ವಿದ್ಯಾರ್ಥಿಗಳ ಮೇಲೆ ಕೇಸ್ ದಾಖಲಾಗಿದೆ ವಿದೇಶಿ ವಿದ್ಯಾರ್ಥಿಗಳಿಗೆ ನಕಲಿ ಪ್ರವೇಶಾತಿ ಪತ್ರ ನೀಡಿದ್ದ ಶ್ರೀಕಾಂತ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮೇಲೆ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್ ದಾಖಲಾಗುತ್ತಿದ್ದಂತೆಯೇ ಕಾಲೇಜಿನ ಪ್ರಾಂಶುಪಾಲ ಚಂದ್ರಬಾಬು ನಾಯ್ಡು ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.