ಹುಬ್ಬಳ್ಳಿ: ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಅವರು ಫೆ.28ರಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ (Dharwad Lok Sabha Constituency) ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತಾದ ಪುಸ್ತಕವನ್ನು ಜೈಶಂಕರ್ ಅಂದು ಬಿಡುಗಡೆಗೊಳಿಸಲಿದ್ದಾರೆ. ಇದನ್ನೂ ಓದಿ: ಮೊದಲ 100 ದಿನ ಏನು ಮಾಡಬೇಕು? – ಹೊಸ ಸರ್ಕಾರದ ಕೆಲಸಕ್ಕೆ ಈಗಲೇ ತಯಾರಿ ಆರಂಭಿಸಿದ ಮೋದಿ
Advertisement
Advertisement
Advertisement
ಹುಬ್ಬಳ್ಳಿ ಬಿವಿಬಿ ಕಾಲೇಜು ಆವರಣದಲ್ಲಿ ಫೆ.28ರಂದು ಸಂಜೆ 4:30ಕ್ಕೆ ಪುಸ್ತಕ ಬಿಡುಗಡೆ ಸಮಾರಂಭ ಜರುಗಲಿದೆ. ಇದನ್ನೂ ಓದಿ: 2017ರಲ್ಲಿ ಶಂಕುಸ್ಥಾಪನೆ ಈಗ ಲೋಕಾರ್ಪಣೆ – ಮೋದಿಯಿಂದ ದೇಶದ ಅತೀ ಉದ್ದದ ಕೇಬಲ್ ಸೇತುವೆ ಉದ್ಘಾಟನೆ
Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ (Pralhad Joshi) ಅವರ 16 ವರ್ಷದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ಮಾಹಿತಿ ಒಳಗೊಂಡ ಪುಸ್ತಕ ಇದಾಗಿದೆ.
ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ಸಬಲೀಕರಣಕ್ಕಾಗಿ ಕೈಗೊಂಡ ಚಟುವಟಿಕೆಗಳನ್ನು ಈ ಪುಸ್ತಕ ವಿಸ್ತಾರವಾಗಿ ಒಳಗೊಂಡಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.