ಬೆಂಗಳೂರು: ಚಿಕನ್ ಅಂಗಡಿ (chicken stall )ಮುಂದೆ ಒಬ್ಬ ದೈತ್ಯ ವ್ಯಕ್ತಿ ಬಂದು ನಿಂತಿದ್ದ.. ಏಕಾಏಕಿ ಅಲ್ಲಿ ಗಲಾಟೆ ಶುರುವಾಗಿತ್ತು. ಜಗಳ ಶುರುವಾದ ಸ್ವಲ್ಪ ಹೊತ್ತಿನಲ್ಲೇ ಆ ದೈತ್ಯವಕ್ತಿ ಹೆಣವಾಗಿ ಬಿದ್ದಿದ್ದ.
ಹೌದು. ಚಿಕನ್ ಖರೀದಿಗೆ ಬಂದಿದ್ದ ನೈಜೀರಿಯಾ ಮೂಲದ ವಿದೇಶಿ ಪ್ರಜೆಯೊಬ್ಬನನ್ನ ಕೊಲೆ ಮಾಡಿರೋ ಘಟನೆ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆಯಲ್ಲಿ 40 ವರ್ಷ ವಯಸ್ಸಿನ ಅಡಿಯಾಕೋ ಮಸಾಲಿಯೋ ಎಂಬಾತನನ್ನ ಕೊಲೆ ಮಾಡಿರೋ ಘಟನೆ ವರದಿಯಾಗಿದೆ.
Advertisement
Advertisement
ಅಂದಹಾಗೆ ಬುಧವಾರ (ಫೆ.20) ಬಾಗಲೂರು ಠಾಣಾ ವ್ಯಾಪ್ತಿಯ ಬೆಳ್ಳಹಳ್ಳಿಗೆ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಬಂದಿದ್ದ ನೈಜೀರಿಯಾ ಪ್ರಜೆ ಅಡಿಯಾಕೋ ಮಸಾಲಿಯೋ ಚಿಕನ್ ಸೆಂಟರ್ ವೊಂದರಲ್ಲಿ ಚಿಕನ್ ಖರೀದಿಗೆ ಹೋಗಿದ್ದ. ಈ ವೇಳೆ ಆತನ ದೈತ್ಯ ದೇಹ, ಆತನ ಓಡಾಟ ನೋಡಿ ಸ್ಥಳೀಯರು ಅನುಮಾಸ್ಪದವಾಗಿ ಓಡಾಡ್ತಿದ್ದಾನೆ ಅಂತಾ ತಡೆದು ಪ್ರಶ್ನೆ ಮಾಡಿದ್ದಾರೆ.
Advertisement
Advertisement
ನಗರದಲ್ಲಿ ಆಗಾಗ್ಗೆ ನೈಜೀರಿಯಾ ಮೂಲದವ್ರು ಡ್ರಗ್, ಗಾಂಜಾ ಪೆಡ್ಲಿಂಗ್ ನಲ್ಲಿ ತೊಡಗಿಸಿಕೊಳ್ಳೋದು ಕಂಡುಬರುತ್ತಿರೋದ್ರಿಂದ ಈತನನ್ನೂ ಕೂಡ ಪೆಡ್ಲರ್ ಅಂತಾ ಅಂದ್ಕೊಂಡು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸ್ಥಳೀಯರಿಗೂ ದೈತ್ಯ ಪ್ರಜೆಗೂ ಗಲಾಟೆ ಶುರುವಾಗಿದೆ. ಗಲಾಟೆ ನಡುವೆ ಯಾಸೀನ್ ಖಾನ್ ಎಂಬಾತನಿಗೆ ಅಡಿಯಾಕೋ ಮಸಾಲಿಯೋ ಒಂದೆರಡೇಟು ಹೊಡೆದಿದ್ದ ಅದಕ್ಕೆ ಕೋಪಗೊಂಡಿದ್ದ ಯಾಸೀನ್ ಖಾನ್ ಅಲ್ಲಿಯೇ ಇದ್ದ ಮರದ ತುಂಡು ಒಂದನ್ನ ಕೈಗೆತ್ತಿಕೊಂಡವನೇ ಸೀದಾ ಅಡಿಯಾಕೋ ತಲೆಗೆ ಬಿಟ್ಟಿದ್ದಾನೆ. ನಂತರ ಗಲಾಟೆ ಜೋರಾಗಿದೆ, ಗಲಾಟೆ ನಡುವೆ ಬೆಳ್ಳಹಳ್ಳಿ ಬಂಡೆ ಬಳಿ ಹೋಗಿದ್ದ ಅಡಿಯಾಕೋ ಸುಸ್ಥಾಗಿ ಬಿದ್ದು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಇನ್ನು ಅಡಿಯಾಕೋ ಶವ ನೋಡಿದ್ದ ಸ್ಥಳೀಯರು ಕೂಡಲೇ ಬಾಗಲೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರಕರಣ ದಾಖಲಿಸಿದ್ದ ಪೊಲೀಸ್ರು ಆರೋಪಿ ಯಾಸೀನ್ ಖಾನ್‌ನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಕೊಲೆಯಾದ ನೈಜೀರಿಯಾ ಮೂಲದ ವ್ಯಕ್ತಿಯ ಹಿನ್ನೆಲೆ ಏನು..? ವಿಸಾ ಮುಗಿದಿತ್ತಾ..? ಅಸಲಿಗೆ ಯಾಕೆ ಅಲ್ಲಿಗೆ ಬಂದಿದ್ದ ಅನ್ನೋದು ತನಿಖೆ ನಂತರವೇ ಗೊತ್ತಾಗಬೇಕು.