ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಸ್ಫೋಟಕ ತಿರುವೊಂದು ದೊರೆತಿದೆ.
ದೀಪಕ್ ರಾವ್ ಹತ್ಯೆಗೆ ಫಾರಿನ್ ಫಂಡಿಂಗ್ ಬಂದಿದ್ದು, ಉಳ್ಳಾಲದ ಟಾರ್ಗೆಟ್ ಗ್ರೂಪ್ ಮೂಲಕ ಹತ್ಯೆಗೆ ಸುಪಾರಿ ಕೊಡಲಾಗಿತ್ತು. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರೋ ನಾಲ್ವರು ಈ ಟಾರ್ಗೆಟ್ ಗ್ರೂಪ್ ಪ್ರಮುಖನ ಸಹಚರರಾಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್
Advertisement
Advertisement
ಟಾರ್ಗೆಟ್ ಗ್ರೂಪಿನಲ್ಲಿದ್ದ ಕಾಟಿಪಳ್ಳದ ಸಫ್ವಾನ್ ಸುರತ್ಕಲ್ ಪ್ರದೇಶದಲ್ಲಿ ಗ್ಯಾಂಗ್ ಕಟ್ಟಿಕೊಂಡಿದ್ದ. ಹೀಗಾಗಿ ಪೊಲೀಸರು ರೌಡಿ ಸಫ್ವಾನ್ ಬಂಧನಕ್ಕೆ ಬಲೆ ಬೀಸಿದ್ದರು. ಆದ್ರೆ ರಾಜಕಾರಣಿಗಳಿಂದ ಇದಕ್ಕೆ ತಡೆಹಿಡಿಯಲಾಗುತ್ತಿತ್ತು. ಎರಡು ತಿಂಗಳ ಹಿಂದೆಯಷ್ಟೇ ರೌಡಿ ತಂಡವೊಂದು ಸಫ್ವಾನ್ ನನ್ನು ಕೊಲೆ ಮಾಡಿತ್ತು. ಇತ್ತೀಚೆಗೆ ಚಾರ್ಮಡಿಯಲ್ಲಿ ಸಫ್ವಾನ್ ಎಂಬಾತನ ಶವ ಪತ್ತೆಯಾಗಿತ್ತು. ಆತನ ಕೊಲೆಯನ್ನು ಉಳ್ಳಾಲದ ಟಾರ್ಗೆಟ್ ಗುಂಪಿನ ಇನ್ನೊಬ್ಬ ಸಫ್ವಾನ್ ಎಂಬಾತ ನಡೆಸಿದ್ದ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿತ್ತು. ಸದ್ಯ ಆರೋಪಿ ಸಫ್ವಾನ್ ಜೈಲಿನಲ್ಲಿದ್ದಾನೆ ಅಂತ ಪಬ್ಲಿಕ್ ಟಿವಿಗೆ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. ಇದನ್ನೂ ಓದಿ: ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು
Advertisement
Advertisement
ಟ್ರಾವೆಲ್ ಏಜೆನ್ಸಿ ಮೂಲಕ ತೆರೆದುಕೊಂಡಿದ್ದ ಟಾರ್ಗೆಟ್ ಗ್ರೂಪ್, ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಎಂಟು ವರ್ಷಗಳ ಹಿಂದೆ ಆರಂಭಗೊಂಡಿತ್ತು. ಸುರತ್ಕಲ್, ಮಂಗಳೂರು, ಉಳ್ಳಾಲದಲ್ಲಿ ಸಕ್ರಿಯವಾಗಿರುವ ಈ ತಂಡದಿಂದ ಮೂರು ತಿಂಗಳ ಹಿಂದೆ ಉಳ್ಳಾಲದಲ್ಲಿ ಬಿಜೆಪಿ ಕಾರ್ಯಕರ್ತ ಝುಬೈರ್ ಎಂಬವರನ್ನು ಕೊಲೆ ಮಾಡಲಾಗಿದೆ. ಇನ್ನು ಈ ಟಾರ್ಗೆಟ್ ಗ್ರೂಪ್ ಗೆ ಸೌದಿ, ದುಬೈನಿಂದ ಹಣಕಾಸಿನ ನೆರವು ಹರಿದುಬರುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್
ಬುಧವಾರ ಮಧ್ಯಾಹ್ನ ಸುಮಾರು 1.30ರ ಸಮಯಕ್ಕೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ರು. ಕೂಡಲೇ ಎಚ್ಚೆತ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ
https://www.youtube.com/watch?v=h2ySxt7VrtE
https://www.youtube.com/watch?v=0iJpHrCbDbc