ಚಿಕ್ಕಬಳ್ಳಾಪುರ: ಜಿಲ್ಲೆಯ ಐತಿಹಾಸಿಕ ಪುರಾತನ ಪ್ರಸಿದ್ಧ ವಿದುರಾಶ್ವತ್ಥ ಗ್ರಾಮದ ಅಶ್ವತ್ಥ ನಾರಾಯಣಸ್ವಾಮಿ ದೇಗುಲದ ಹುಂಡಿ ಎಣಿಕೆ ಕಾರ್ಯದ ವೇಳೆ ವಿದೇಶಿ ಕರೆನ್ಸಿ ಅಮೆರಿಕನ್ ಡಾಲರ್ ಸೇರಿದಂತೆ ನಿಷೇಧಿತ 100 ರೂ. ಮೌಲ್ಯದ ನೋಟುಗಳು ಪತ್ತೆಯಾಗಿವೆ.
ಕಳೆದ 3 ತಿಂಗಳಿಂದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಗಿದ್ದು, ಒಟ್ಟು 15 ಲಕ್ಷದ 71 ಸಾವಿರ ರೂ. ಸಂಗ್ರಹವಾಗಿದೆ. ಹುಂಡಿಯಲ್ಲಿ 7 ಅಮೆರಿಕನ್ ಡಾಲರ್ ನೋಟುಗಳು ಹಾಗೂ 24 ನಿಷೇಧಿತ 100 ರೂ. ನೋಟುಗಳು ಸೇರಿದಂತೆ 3 ಅಮೆರಿಕನ್ ಡಾಲರ್ ನಾಣ್ಯಗಳು ಪತ್ತೆಯಾಗಿವೆ.
Advertisement
Advertisement
3 ತಿಂಗಳಿಗೊಮ್ಮ ಹುಂಡಿ ಎಣಿಕೆ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಎರಡು ತಿಂಗಳಿಗೊಮ್ಮೆ ಹಣ ಎಣಿಕೆ ಕಾರ್ಯ ಮಾಡಲು ಚಿಂತಿಸಿದ್ದೇವೆ ಎಂದು ಪ್ರಭಾರ ಕಾರ್ಯನಿರ್ವಾಹಕಾಧಿಕಾರಿ ಶ್ರೀನಿವಾಸ್ ತಿಳಿಸಿದರು.
Advertisement
ಹುಂಡಿಯಲ್ಲಿ ಭಕ್ತರೊಬ್ಬರು ಅಶ್ವತ್ಥನಾರಾಯಣ, ಅಶ್ವತ್ಥನಾರಾಯಣ ಎಂದು ಅಶ್ವತ್ಥನಾರಾಯಣ ನಾಮ ಜಪವನ್ನು ಸಾವಿರಾರು ಬಾರಿ ಬರೆದು ಹುಂಡಿಗೆ ಆ ಪುಸ್ತಕವನ್ನು ಅರ್ಪನೆ ಮಾಡಿದ್ದರು. ಮತ್ತೊಬ್ಬ ಭಕ್ತ ತಮ್ಮ ಸಂಬಂಧಿಯೊಬ್ಬರು ಬ್ರಾಹ್ಮಣ ಸಂಘದ ಅಧ್ಯಕ್ಷರಾಗಲಿ ಎಂದು ದೇವರಿಗೆ ಹರಕೆ ಬರೆದು ಹುಂಡಿಗೆ ಹಾಕಿದ್ದರು.