ಬೆಂಗಳೂರು: ವಿದೇಶದಿಂದ ಬಂದವರ ಮೇಲೆ ಮೊದಲೇ ಈ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ವೈರಸ್ ಎಫೆಕ್ಟ್ ಆಗುತ್ತಿರಲಿಲ್ಲವೇನೋ ಎಂಬ ಮಾತು ಕೇಳಿ ಬರುತ್ತಿದೆ. ಯಾಕೆಂದರೆ ಇದೀಗ ಕರ್ನಾಟಕ ಆರೋಗ್ಯ ಇಲಾಖೆ ವಿದೇಶದಿಂದ ಬಂದವರ ಕೈ ಮೇಲೆ ಸೀಲ್ ಹಾಕುತ್ತಿದೆ.
ಕರ್ನಾಟಕ ಆರೋಗ್ಯ ಇಲಾಖೆಯಿಂದ ಸೀಲ್ ಹಾಕಲಾಗುತ್ತಿದೆ. ವಿದೇಶದಿಂದ ಬಂದ ಪ್ರತಿಯೊಬ್ಬರ ಮೇಲೂ 15 ದಿನಗಳ ಕಾಲ ಹೋಮ್ ಕ್ವಾರೆಂಟೈಲ್ ಆದೇಶವಿರುವ ಸೀಲ್ ಹಾಕಲಾಗುತ್ತಿದೆ. ಗುರುವಾರ ಏರ್‌ಪೋರ್ಟ್‌ಗೆ ಬಂದವರ ಕೈಗಳ ಮೇಲೆ ಸೀಲ್ ಹಾಕಲಾಗಿದೆ.
Advertisement
#HealthWarriors #HelpUsToHelpYou
ಕೊರೊನ ನಿಯಂತ್ರಣದ ಮುಂಜಾಗೃತ ಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣ ಅತ್ಯವಶ್ಯಕ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೈಗಳ ಮೇಲೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ. pic.twitter.com/TLm8uGAHEW
— K'taka Health Dept (@DHFWKA) March 19, 2020
Advertisement
ಸೀಲ್ ಹಾಕಿಸಿಕೊಂಡವರು ಏಪ್ರಿಲ್ 3 ವರೆಗೆ ಹೋಮ್ ಕ್ವಾರೆಂಟೈನ್‍ನಲ್ಲಿರಬೇಕು. ಅಂದರೆ ನಿಗಾದಲ್ಲಿರಬೇಕು. ಈ ವೇಳೆ ಹೊರಗೆ ಸುತ್ತುವುದು ಯಾವುದನ್ನೂ ಮಾಡುವಂತಿಲ್ಲ. ವಿಮಾನದಿಂದ ಬಂದಿಳಿದ ಎಲ್ಲರ ಎಡಗೈಗೆ ಸೀಲ್ ಹಾಕಲಾಗಿದೆ. ಹೋಮ್ ಕ್ವಾರೆಂಟೈನ್‍ನಲ್ಲಿದ್ದ ದಿನದಲ್ಲಿ ಕೊರೊನಾ ವೈರಸ್ ಲಕ್ಷಣಗಳೇನೂ ಕಂಡುಬರದಿದ್ದರೆ ಮನೆಗೆ ಕಳಿಸಲಾಗುತ್ತದೆ.