ಬೆಂಗಳೂರು: ಕಾಲ ಕಳೆದಂತೆ ಹೊಸ ಹೊಸ ಕ್ರೇಜ್ ಗಳು ಕ್ರಿಯೆಟ್ ಆಗುತ್ತಿರುತ್ತವೆ. ಈಗ ನಗರದಲ್ಲಿ ವಿದೇಶಿ ತಳಿಗಳ ಅತಿ ಹೆಚ್ಚು ಬೆಲೆಯ ಶ್ವಾನಗಳು ಅಧಿಕವಾಗಿದೆ.
ಬೀಜಿಂಗ್ ನ ಕೊರಿಯನ್ ಮ್ಯಾಸ್ಟಿಫ್ ಶ್ವಾನ, ಇದು ಅಪರೂಪದ ಬ್ರೀಡ್ ತಳಿಯಾಗಿದ್ದು, ಈ ರೀತಿ ಶ್ವಾನವೊಂದಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿಯಾಗಿದೆ. ಈ ಶ್ವಾನಗಳು ಬೇರೆ ಬೇರೆ ದೇಶಗಳಲ್ಲಿ ಕಾಣಸಿಗುವ ಅತ್ಯಂತ ವಿರಳ ತಳಿಗಳಾಗಿದ್ದು, ಈಗ ಸಿಲಿಕಾನ್ ಸಿಟಿಯಲ್ಲಿ ಕಾಣಸಿಗುತ್ತಿವೆ. ದುಬಾರಿ ಶ್ವಾನಗಳನ್ನು ಸಾಕುವುದು ಕೂಡ ಈಗ ಪ್ರತಿಷ್ಟೆಯ ವಿಷಯವಾಗಿದೆ. ಅವುಗಳನ್ನು ನೋಡಿಕೊಳ್ಳಲೇ ಶ್ವಾನ ಪ್ರಿಯರು ತಿಂಗಳಿಗೆ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ.
ಚೈನಾ ಅಲೆಸ್ಕನ್ ಮ್ಯಾಲಾಮ್ಯೂಟ್:
ಚೈನಾದ ಟಿಬೇಟಿಯನ್ ಮ್ಯಾಸ್ಟಿಫ್ ಗೆ ಬರೋಬ್ಬರಿ 10 ಕೋಟಿ ರೂಪಾಯಿ. ಇದು ಪ್ರಪಂಚದಾದ್ಯಂತ ಅತ್ಯಂತ ದುಬಾರಿ ಶ್ವಾನವಾಗಿದೆ. ಸಿಂಹದ ರೀತಿ ಕೂದಲಿರುವುದರಿಂದ ಲಯನ್ ಹೆಡ್ ಟಿಬೇಟಿಯನ್ ಮ್ಯಾಸ್ಟಿಫ್ ಅಂತ ಕರೆಯುತ್ತಾರೆ. ಆಸ್ಟ್ರೇಲಿಯಾದ ನ್ಯೂ ಫೌಂಡ್ ಲ್ಯಾಂಡ್ 5 ಕೋಟಿ ರೂಪಾಯಿ ಇದ್ದರೆ, ಅಮೆರಿಕನ್ ಬುಲ್ಲಿಗೆ 4 ಕೋಟಿ, ಅಮೆರಿಕಾದ ಫ್ರೆಂಚ್ ಮ್ಯಾಸ್ಟಿಫ್ 3 ಕೋಟಿ ರೂ. ಆಗಿದೆ.
ಸ್ಪೆಷಲ್ ಗ್ರೇ ಡೆನ್, ಡಾಬರ್ ಮೆನ್ ಗಳ ಪ್ರದರ್ಶನವನ್ನು ನಗರದಲ್ಲಿ ನಡೆಸಲಾಯಿತು. ಇವೆಲ್ಲವೂ ಅಪರೂಪದ ಹಾಗೂ ದುಬಾರಿ ಶ್ವಾನಗಳಾಗಿವೆ. ಇವೆಲ್ಲವನ್ನೂ ನಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತೇವೆ. ನಿತ್ಯ ಇವುಗಳ ಆರೈಕೆಯಲ್ಲೇ ದಿನ ಕಳೆಯುತ್ತೇನೆ ಎಂದು ಶ್ವಾನದ ಮಾಲೀಕರಾದ ಸಂಗೀತಾ ಹೇಳಿದ್ದಾರೆ.