ನವದೆಹಲಿ: ದೇಶದ ಸಿನಿಮಾ ಇತಿಹಾಸದಲ್ಲಿ ಹಲವು ದಾಖಲೆ ಬರೆದ ಬಾಹುಬಲಿ ಸಿನಿಮಾ ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲೂ ಸದ್ದು ಮಾಡಿದೆ.
ಫೋರ್ಬ್ಸ್ 2017ರ ಭಾರತದ ಟಾಪ್ ಸೆಲೆಬ್ರಿಟಿಗಳ ಆದಾಯದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಬಾಹುಬಲಿ ನಿರ್ದೇಶಕ ಎಸ್‍ಎಸ್ ರಾಜಮೌಳಿ, ನಟ ಪ್ರಭಾಸ್, ಖಳನಟ ರಾಣಾ ದಗ್ಗುಬಾಟಿ ಸ್ಥಾನವನ್ನು ಪಡೆದಿದ್ದಾರೆ.
Advertisement
Advertisement
ವಿಶೇಷ ಏನೆಂದರೆ 2016ರ ಪಟ್ಟಿಯಲ್ಲಿ ಈ ಮೂವರು ಸ್ಥಾನ ಪಡೆದಿರಲಿಲ್ಲ. ಆದರೆ ಈ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಹುಬಲಿ ಭಾಗ 2 ಏಪ್ರಿಲ್ 28 ರಂದು ಬಿಡುಗಡೆಯಾಗಿತ್ತು. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಸಿನಿಮಾ 1,700 ಕೋಟಿ ರೂ.ಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್ ನಲ್ಲಿ ಗಳಿಸಿತ್ತು.
Advertisement
ಇದನ್ನು ಓದಿ: ಫೋರ್ಬ್ಸ್ ಇಂಡಿಯಾ ಟಾಪ್ 100 ಸೆಲೆಬ್ರಿಟಿ ಪಟ್ಟಿ ರಿಲೀಸ್: ಯಾರ ಆದಾಯ ಎಷ್ಟು ಕೋಟಿ ಇದೆ ಗೊತ್ತಾ?
Advertisement
ಇದನ್ನು ಓದಿ: ಬಾಹುಬಲಿ-2 ಚಿತ್ರದಿಂದ ಕರ್ನಾಟಕಕ್ಕೆ ಕೋಟಿ ಕೋಟಿ ಆದಾಯ
ಎಸ್.ಎಸ್.ರಾಜಮೌಳಿ
ವಯಸ್ಸು – 44
ಸ್ಥಾನ – 15
ವಾರ್ಷಿಕ ಆದಾಯ – 55 ಕೋಟಿ ರೂ.
ಪ್ರಭಾಸ್
ವಯಸ್ಸು – 38
ಸ್ಥಾನ – 22
ವಾರ್ಷಿಕ ಆದಾಯ – 36.25 ಕೋಟಿ ರೂ.
ರಾಣಾ ದಗ್ಗುಬಾಟಿ
ವಯಸ್ಸು – 33
ಸ್ಥಾನ – 36
ವಾರ್ಷಿಕ ಆದಾಯ – 22 ಕೋಟಿ ರೂ.