ಮುಂಬೈ: ಕಳೆದ ವರ್ಷ T20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ (Team Inaid) ಹೀನಾಯ ಸೋಲನುಭವಿಸಿತ್ತು. ಇದು ರೋಹಿತ್ ಶರ್ಮಾ (Rohit Sharma) ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ಬಳಿಕ ಐಸಿಸಿ ಟೂರ್ನಿಯ ಮೊದಲ ಸೋಲು ಕೂಡ ಆಗಿತ್ತು. ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದ ನಂತರ ರೋಹಿತ್ ಶರ್ಮಾ ಡಗೌಟ್‌ನಲ್ಲಿ ಕುಳಿತು ಕಣ್ಣೀರಿಟ್ಟಿದ್ದರು. ಅದಕ್ಕೆಲ್ಲ ತಕ್ಕ ಉತ್ತರ ಕೊಡುವ ಸಂದರ್ಭಕ್ಕಾಗಿ ಟೀಂ ಇಂಡಿಯಾ ಕಾದು ಕುಳಿತಿದೆ.
Rohit Sharma crying in the dugout just broke my heart into a million pieces. He knows his innings was one of the deciding factors. pic.twitter.com/9QMLt5dlw3
— Aritra Mukherjee (@aritram029) November 10, 2022
Advertisement
ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ (KL Rahul) ಅವರ ಫ್ಲಾಪ್ ಶೋ, ವಿರಾಟ್ ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್, ಇಂತಹ ಈ ತಪ್ಪುಗಳಿಂದಾಗಿ ಭಾರತ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಹೀನಾಯ ಸೋಲು ಅನುಭವಿಸಬೇಕಾಗಿತ್ತು. ಇಂಗ್ಲೆಂಡ್ ತಂಡವು 10 ವಿಕೆಟ್‌ಗಳ ಜಯ ಸಾಧಿಸಿ ಬೀಗಿತ್ತು. ಇದು ಟೀಂ ಇಂಡಿಯಾ ಆಟಗಾರರ ಸಾಮರ್ಥ್ಯಕ್ಕೂ ಕಪ್ಪು ಚುಕ್ಕೆಯಂತಾಗಿತ್ತು. ಈ ಸೋಲಿನ ನಂತರ ರೋಹಿತ್ ಶರ್ಮಾ ಡಗೌಟ್‌ನಲ್ಲಿ ಕುಳಿತು ಕಣ್ಣೀರಿಟ್ಟಿದ್ದರು. ಅಲ್ಲದೇ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: 20 ವರ್ಷಗಳಿಂದ ಆಂಗ್ಲರ ವಿರುದ್ಧ ಗೆದ್ದೇ ಇಲ್ಲ ಭಾರತ – ಸೇಡು ತೀರಿಸಿಕೊಳ್ಳಲು ಸಮರಾಭ್ಯಾಸ?
Advertisement
Advertisement
ಅಂದು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ರಾಹುಲ್ ವಿಕೆಟ್ ಕಳೆದುಕೊಂಡರೂ ನಂತರ ರೋಹಿತ್ ಮತ್ತು ಕೊಹ್ಲಿ ನಿಧಾನವಾಗಿ ಆಡಿ ಇನ್ನಿಂಗ್ಸ್ ಕಟ್ಟಿದ್ದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಬಿರುಸಿನ ಆಟವಾಡಿದ್ದರಿಂದ ತಂಡದ ಮೊತ್ತ 160ರ ಗಡಿ ದಾಟಿತ್ತು. ಅಂತಿಮವಾಗಿ ಭಾರತ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು. ಇದು ಸವಾಲಿನ ಮೊತ್ತವೇ ಆಗಿದ್ದರೂ ಭಾರತದ ಬೌಲರ್‌ಗಳಿಂದ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ. ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಬೌಂಡರಿ, ಸಿಕ್ಸರ್ ಸಿಡಿಸಿ ತಂಡವನ್ನು ಫೈನಲಿಗೆ ಕೊಂಡೊಯ್ದಿದ್ದರು. ಜೋಸ್ ಬಟ್ಲರ್ 80 ರನ್ (49 ಎಸೆತ, 9 ಬೌಂಡರಿ, 3 ಸಿಕ್ಸರ್) ಅಲೆಕ್ಸ್ ಹೇಲ್ಸ್ 86 ರನ್ (47 ಎಸೆತ, 4 ಬೌಂಡರಿ, 7 ಸಿಕ್ಸರ್) ಚಚ್ಚಿ ಇಂಗ್ಲೆಂಡ್‌ಗೆ 10 ವಿಕೆಟ್‌ಗಳ ಜಯ ತಂದುಕೊಟ್ಟಿದ್ದರು. ಈ ವಿರೋಚಿತ ಸೋಲು ಅಭಿಮಾನಿಗಳಲ್ಲಿ ಆರದ ಗಾಯವಾಗಿ ಉಳಿದಿದೆ. ಇದನ್ನೂ ಓದಿ: 23 ವರ್ಷಗಳ ಬಳಿಕ ಗೆದ್ದು ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಆಫ್ರಿಕಾ – ಸೆಮಿಫೈನಲ್ ರೇಸ್‌ನಿಂದ ಪಾಕ್ ಔಟ್
Advertisement
ಸದ್ಯ ಕಳೆದ 5 ದಿನಗಳಿಂದಲೂ ಟೀಂ ಇಂಡಿಯಾ ಲಕ್ನೋ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ. ಅಭ್ಯಾಸವೇಳೆ ನಡೆಸುತ್ತಿದ್ದ ವೇಳೆ ಕೊಹ್ಲಿ, ಟೀಂ ಇಂಡಿಯಾ ಆರಂಭಿಕ ಶುಭಮನ್ ಗಿಲ್ (Shubman Gill) ಅವರೂ ಸಹ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅಲ್ಲದೇ ಅಭ್ಯಾಸದ ವೇಳೆ ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮೊದಲಾದವರೂ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ. ಒಂದು ವೇಳೆ ಕೊನೇ ಕ್ಷಣದಲ್ಲಿ ಪ್ಲೇಯಿಂಗ್-11 ನಲ್ಲಿ ಬದಲಾವಣೆಯಾದರೆ ಕೊಹ್ಲಿ 6ನೇ ಬೌಲರ್ ಆಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದಾಖಲೆ ಶತಕ ಸಿಡಿಸಲು ಕೊಹ್ಲಿ ವೇಯ್ಟಿಂಗ್ – ಮತ್ತೆ ಆ ತಪ್ಪು ಮಾಡದಿರಲಿ ಅಂದ್ರು ಫ್ಯಾನ್ಸ್
Web Stories