ಬೆಂಗಳೂರು: ಇತ್ತ ಬಿ.ಎಸ್ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿ ಸಿಎಂ ಖುರ್ಚಿಯನ್ನು ಅಲಂಕರಿಸಿದ್ರೆ, ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಹೈಡ್ರಾಮಾ ನಡೆಯುತ್ತಿದೆ. ತಮ್ಮ ಶಾಸಕರ ಜೊತೆ ಎರಡೂ ಪಕ್ಷಗಳು ದಿಢೀರ್ ಆಗಿ ಹೊರ ರಾಜ್ಯಕ್ಕೆ ಶಿಫ್ಟ್ ಆಗಿವೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಹೊರರಾಜ್ಯಕ್ಕೆ ದಿಢೀರ್ ಶಿಫ್ಟ್ ಆಗಲು ಹತ್ತು ಕಾರಣಗಳೇನು ನೋಡೋದಾದ್ರೆ
* ಈಗಲ್‍ಟನ್ ರೆಸಾರ್ಟ್‍ಗೆ ನೀಡಲಾಗಿದ್ದ ಪೊಲೀಸ್ ಭದ್ರತೆ ಹಿಂಪಡೆದಿದ್ದು..!
* ಕಟ್ಟಾ ಸುಬ್ರಹ್ಮಣ್ಯನಾಯ್ಡು ಪುತ್ರ ಕಟ್ಟಾ ಜಗದೀಶ್ ರೆಸಾರ್ಟ್ ಬಳಿ ಕಾಣಿಸಿಕೊಂಡಿದ್ದು
* ಮೇಲಿಂದ ಮೇಲೆ ಬಿಜೆಪಿ ಕಡೆಯವರಿಂದ ಬರುತ್ತಿರುವ ಫೋನ್ ಕರೆಗಳು
* ರಾಜ್ಯದಲ್ಲಿ ಎಲ್ಲೇ ಇದ್ದರೂ ನಮ್ಮ ಶಾಸಕರು ಸೇಫ್ ಅಲ್ಲ..!
Advertisement
* ರಾಜ್ಯದಲ್ಲಿದ್ದರೇ ಗುಪ್ತಚರ ಮೂಲಗಳಿಂದ ರಹಸ್ಯ ಸೋರಿಕೆ ಆತಂಕ
* ಚುನಾವಣೆಗೆ ಮುನ್ನ ನಡೆದ `ಜಿಗಿತ’ ಈಗಲೂ ರಿಪೀಟ್ ಆಗಬಹುದು
* ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳಯವನ್ನು ಕಂಗಾಲಾಗಿಸಿದ ಬಿಎಸ್‍ವೈ ಆತ್ಮವಿಶ್ವಾಸ
Advertisement
* ಸುಮಾರು 15 ದಿನ ಹೊರ ರಾಜ್ಯದಲ್ಲೇ ಉಳಿದು ಬಿಜೆಪಿಗೆ ಮುಖಭಂಗ ಮಾಡುವುದು
* ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಲ್ಲಿನ ಒತ್ತಡ ಕಡಿಮೆ ಮಾಡುವುದು
* ತಮ್ಮ ಶಾಸಕರನ್ನ ರಕ್ಷಿಸಿಕೊಳ್ಳುವ ಮೂಲಕ ಬಿಎಸ್‍ವೈ ಸರ್ಕಾರ ಉರುಳಿಸುವುದು
Advertisement
Advertisement
ಹಿಂದೊಮ್ಮೆ ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿಎಸ್‍ವೈ ವಿರುದ್ಧ ಬಂಡೆದ್ದು ಸುಮಾರು 40 ಶಾಸಕರನ್ನ ಹೈದರಾಬಾದ್‍ಗೆ ಕರೆದೊಯ್ದು, ರಾಜ್ಯ ರಾಜಕಾರಣದ ಕೇಂದ್ರವನ್ನಾಗಿಸಿದ್ರು. ಇದೀಗ ರಾಜ್ಯ ರಾಜಕಾರಣದ ಚಿತ್ತ ಮತ್ತೆ ಭಾಗ್ಯ ನಗರಿಯತ್ತ ನೆಟ್ಟಿದೆ.
ಯಾಕಂದ್ರೆ, ಕಳೆದ ರಾತ್ರಿ ಭಾರೀ ಹೈಡ್ರಾಮಾಗಳ ನಡುವೆ ಬಿಜೆಪಿ ಗಾಳಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಮೂರು ಸ್ಲೀಪರ್ ಕೋಚ್ ಬಸ್‍ಗಳಲ್ಲಿ ಹೈದರಾಬಾದ್ ದಾರಿ ಹಿಡಿದಿದ್ದಾರೆ. ಮೊದಲು ಕೊಚ್ಚಿ ಅಂದ್ರು. ಆಮೇಲೆ ಪುದುಚ್ಚೇರಿ ಅಂದ್ರು. ಏರ್ ಪೋರ್ಟ್ ನಲ್ಲಿ ಚಾರ್ಟಡ್ ವಿಮಾನ ಟೇಕ್ ಆಫ್‍ಗೆ ಡಿಜಿಸಿಎ ಅನುಮತಿ ನೀಡಲಿಲ್ಲ. ಹೀಗಾಗಿ ಮಧ್ಯರಾತ್ರಿ 12.30ರ ನಂತರ ರಸ್ತೆ ಮೂಲಕ ಹೈದ್ರಾಬಾದ್ ಕಡೆ ಪ್ರಯಾಣ ಶುರು ಮಾಡಿದ್ರು.
ಸದ್ಯ ಹೈದರಾಬಾದ್ ನತ್ತ 115 ಶಾಸಕರನ್ನು ಹೊತ್ತು ಬಸ್‍ಗಳು ಸಾಗುತ್ತಿವೆ. ಬಸ್‍ಗಳ ಹಿಂದೆ ಮುಂದೆ ಮಾಜಿ ಸಚಿವ ಡಿಕೆ ಶಿವಕುಮಾರ್ ನೇಮಿಸಿರುವ ಖಾಸಗಿ ಅಂಗರಕ್ಷಕರ ವಾಹನಗಳು ಸಾಗುತ್ತಿವೆ. ಇನ್ನು ಸ್ವಯತ್ತ ಸಂಸ್ಥೆ ಡಿಜಿಸಿಎಯನ್ನು ಕೇಂದ್ರ ದುರುಪಯೋಗ ಮಾಡಿಕೊಂಡಿದೆ ಅಂತಾ ಕಾಂಗ್ರೆಸ್ ಆರೋಪಿಸಿದೆ. ಆದ್ರೆ ಡಿಜಿಸಿಎ ಮಾತ್ರ ರಾಜ್ಯದಿಂದ ರಾಜ್ಯಕ್ಕೆ ಚಾರ್ಟರ್ಡ್ ವಿಮಾನ ಹಾರಲು ನಮ್ಮ ಪರ್ಮೀಷನ್ ಅಗತ್ಯವೇ ಇಲ್ಲ ಎಂದಿದೆ. ಈ ಮೂಲಕ ವಿವಾದದಿಂದ ದೂರ ಸರಿದಿದೆ.