ಬೆಂಗಳೂರು: ಸ್ಯಾಂಡಲ್ವುಡ್ ರಾಕಿಂಗ್ ಕಪಲ್ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಐರಾಗೆ ಕಿವಿ ಚುಚ್ಚಿಸಿದ್ದಾರೆ. ಈ ವೇಳೆ ಯಶ್ ಕಣ್ಣೀರು ಹಾಕಿದ್ದ ವಿಷಯವನ್ನು ರಾಧಿಕಾ ಪಂಡಿತ್ ಅವರು ಹಂಚಿಕೊಂಡಿದ್ದಾರೆ.
ರಾಧಿಕಾ ಅವರು ತಮ್ಮ ಮಗಳು ಐರಾ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನಾವು ಐರಾಳಿಗೆ ಕಿವಿ ಚುಚ್ಚಿಸಿದ್ದೇವೆ. ಪೋಷಕರಾಗಿ ಈ ಸಂದರ್ಭಕ್ಕೆ ಸಾಕ್ಷಿಯಾಗಲು ನಿಜಕ್ಕೂ ಕಷ್ಟವಾಗುತ್ತದೆ. ಅವಳು ತುಂಬಾ ಅಳುತ್ತಿದ್ದಾಗ ನಮ್ಮ ಹೃದಯ ಒಡೆದು ಹೋದ ಅನುಭವವಾಯಿತು. ನಾನು ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಕಣ್ಣಲ್ಲಿ ನೀರು ನೋಡಿದೆ. ಆಗ ಈ ಸಂಬಂಧ ಎಷ್ಟು ಸುಂದರ ಎಂಬುದು ತಿಳಿಯಿತು. ಸದ್ಯ ಅಪ್ಪ-ಮಗಳು ಕ್ಷೇಮವಾಗಿದ್ದಾರೆ” ಎಂದು ರಾಧಿಕಾ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಕಳೆದ ವಾರ ಕೃಷ್ಣ ಜನ್ಮಾಷ್ಟಮಿಯ ಹಬ್ಬದಂದು ಯಶ್ ಹಾಗೂ ರಾಧಿಕಾ ತಮ್ಮ ಮಗಳು ಐರಾಳಿಗೆ ಕೃಷ್ಣನ ಉಡುಪು ಹಾಕಿ ಫೋಟೋ ಕ್ಲಿಕ್ಕಿಸಿದ್ದರು. ಈ ಫೋಟೋಗಳನ್ನು ರಾಧಿಕಾ ಅವರು ಇನ್ಸ್ಟಾದಲ್ಲಿ ಹಾಕಿ “ನಮ್ಮ ಪುಟ್ಟ ಕೃಷ್ಣ. ಜನ್ಮಾಷ್ಟಮಿಯ ಶುಭಾಶಯಗಳು” ಎಂದು ಬರೆದುಕೊಂಡಿದ್ದರು. ಇನ್ಸ್ಟಾದಲ್ಲಿ ರಾಧಿಕಾ ಅವರು ಒಟ್ಟು ಮೂರು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳಲ್ಲಿ ಐರಾ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾಳೆ.