ಸ್ಯಾಂಡಲ್ ವುಡ್ ನಲ್ಲಿ ಈವರೆಗೂ ಏನೆಲ್ಲ ಪ್ರಯೋಗಗಳು ನಡೆದಿವೆ. ಅನೇಕ ಭಾಗಗಳಿಂದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾ ರಂಗಕ್ಕೆ ಬಂದಿದ್ದಾರೆ. ಇದೇ ಪ್ರಪ್ರಥಮ ಬಾರಿಗೆ ಕೊಡವ ಹೆಣ್ಣುಮಗಳು ಸಿನಿಮಾ ನಿರ್ದೇಶಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಕೊಟ್ಟುಕತ್ತಿರ ಯಶೋದಾ ಪ್ರಕಾಶ್ ‘ರಂಗ ಪ್ರವೇಶ’ ಸಿನಿಮಾದ ಮೂಲಕ ನಿರ್ದೇಶಕಿಯಾಗಿದ್ದಾರೆ. ಈವರೆಗೂ ಕೊಡಗಿನಿಂದ ಅನೇಕ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶಕಿ ಬಂದಿದ್ದು ವಿಶೇಷ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ
Advertisement
ಯಶೋದಾ ಪ್ರಕಾಶ್ ‘ಪೃಥೆ’ ಹೆಸರಿನ ಪ್ರಕಟಿತ ಕಥೆಯನ್ನು ತಮ್ಮ ಚೊಚ್ಚಲು ನಿರ್ದೇಶನದ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮಗಳು ಮತ್ತು ತಾಯಿ ಬಾಂಧವ್ಯದ ಕಥೆಯನ್ನು ಈ ಚಿತ್ರ ಹೊಂದಿದ್ದು, ಭರತನಾಟ್ಯ ಕಲಿಯಲು ಹಂಬಲಿಸುವ ಮಗಳು ಮತ್ತು ಮಗಳ ಕನಸುಗಳನ್ನು ನಿಭಾಯಿಸುವ ತಾಯಿಯು, ಮಗಳ ಭವಿಷ್ಯವನ್ನು ಹೇಗೆ ಕಟ್ಟುತ್ತಾಳೆ ಎನ್ನುವ ಚಿತ್ರಕಥೆ ಇಲ್ಲಿದೆ. ಇದನ್ನೂ ಓದಿ : ಜೈಲಿನಲ್ಲಿ ಚೇತನ್ ಕೂಲ್ ಆಗಿದ್ದಾರೆ : ಪತ್ನಿ ಮೇಘಾ
Advertisement
Advertisement
ಇತ್ತೀಚೆಗಷ್ಟೇ ಸಿನಿಮಾದ ಮುಹೂರ್ತ ನಡೆದಿದೆ. ಬೆಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನಡೆದಿದೆ. ಒಂದೇ ಹಂತದ ಚಿತ್ರೀಕರಣಕ್ಕೆ ತಂಡವು ಪ್ಲ್ಯಾನ್ ಮಾಡಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ‘ಬೆಳದಿಂಗಳ ಬಾಲೆ’ ಖ್ಯಾತಿಯ ಸುಮನ್ ನಗರ್ ಕರ್ ಇದ್ದರೆ, ತಾರಾಗಣದಲ್ಲಿ ನಿರ್ಮಾಪಕ ಕುಮಾರ್ ಎಸ್, ವಿಶೇಷ ಪಾತ್ರದಲ್ಲಿ ಮಾಜಿ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್, ಎಂ.ಡಿ.ಕೌಶಿಕ್ ಸೇರಿದಂತೆ ಹಲವು ಕಲಾವಿದರಿದ್ದಾರೆ.