-ಸಿಎಂ ಗೌರವ ಕಡಿಮೆ ಆಗಿದೆ
ಹುಬ್ಬಳ್ಳಿ: ಮುಡಾ ಕೇಸನ್ನು (MUDA Case) ಏಕಸದಸ್ಯ ಪೀಠ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಎಂ ಆದವರು ಆರೋಪಿಯಾಗಿ ಹಾಜರಾಗಿದ್ದು, ಸಿಎಂ ಗೌರವ ಕಡಿಮೆ ಆಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಟೀಕಿಸಿದ್ದಾರೆ.
Advertisement
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮುಡಾ ಪ್ರಕರಣದಲ್ಲಿ ಸಿಎಂಗೆ ವಿಚಾರಣೆ ಬಗ್ಗೆ ಮಾತನಾಡಿ, ಆ ಕೇಸನ್ನು ಏಕಸದಸ್ಯ ಪೀಠ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಎಂ ಆದವರು ಆರೋಪಿಯಾಗಿ ಹಾಜರಾಗಿದ್ದು, ಸಿಎಂ ಗೌರವ ಕಡಿಮೆ ಮಾಡಿದೆ. ಇತರ ಹಲವಾರು ಪ್ರಕರಣಗಳು ಇವೆ. ಸರ್ಕಾರಿ ನೌಕರರು ರಾಜಕೀಯ ಒತ್ತಡದಿಂದ ಕುಗ್ಗಿದ್ದಾರೆ. ಅವರಿಗೆ ಕಾನೂನುಬಾಹಿರ ಕೆಲಸ ಮಾಡಲು ಒತ್ತಡ ಇದೆ. ನಮ್ಮ ಶಿಗ್ಗಾಂವಿ ಕ್ಷೇತ್ರದಲ್ಲಿ ಸಹ ಹೀಗೆ ಆಗುತ್ತಿದೆ. ಶಾಲೆಯ ಶಿಕ್ಷಕರಿಗೆ ಮಂಥ್ಲಿ ಫಿಕ್ಸ್ ಮಾಡಲು ಹೊರಟಿದ್ದಾರೆ. ಇದಕ್ಕಿಂತ ಅಧಿಪತನ ಏನು ಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: US Election: ಗೆಲುವಿನ ಸನಿಹದಲ್ಲಿ ಟ್ರಂಪ್ – ಸ್ವಿಂಗ್ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ಗೆ ಹಿನ್ನಡೆ
Advertisement
Advertisement
ಗುತ್ತಿಗೆದಾರರು ನಮ್ಮ ಮೇಲೆ ಆರೋಪ ಮಾಡಿದ್ದರು. ಇವತ್ತಿನವರಗೆ ಏನೂ ಸಾಬೀತು ಮಾಡಲು ಆಗಲಿಲ್ಲ. ಅದನ್ನ ರಾಜಕೀಯವಾಗಿಯೂ ಬಳಕೆ ಮಾಡಿಕೊಂಡರು. ಈಗ ಲಿಕ್ಕರ್ ಅಸೋಸಿಯೇಷನ್ ಆರೋಪ ಮಾಡಿದೆ, ಸಿಎಂ ಉತ್ತರ ಕೊಡಬೇಕಲ್ಲಾ? ಸಿಎಂ ಅವರ ಕೈಯಲ್ಲಿ ನೇರವಾಗಿ ಫೈನಾನ್ಸ್ ಇದೆ. ಒಂದೊಂದು ಲಿಕ್ಕರ್ ಲೈಸೆನ್ಸ್ಗೆ ಎಷ್ಟು ದುಡ್ಡು ಹೋಗಿದೆ ಎಂದು ತನಿಖೆ ಆಗಬೇಕು. ಈಗ ಏನು ಹೇಳುತ್ತಾರೆ ಅವರು? ಪೇ ಸಿಎಂ ಅಂತಿದ್ರು, ಈಗ ಪೇ ಡಬಲ್ ಸಿಎಂ ಹಾಗೂ ಸಚಿವರಿಗೆ ಅನ್ನುತ್ತೇವೆ. ಭ್ರಷ್ಟಾಚಾರದಲ್ಲಿ ಇಡೀ ಸರ್ಕಾರ ಮುಳುಗಿದೆ. ಯಾವ ಇಲಾಖೆಯಲ್ಲಿ ಕೇಳಿದರೂ ಭ್ರಷ್ಟಾಚಾರ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿಎಂಗೆ ಕೆಲ ನಿರ್ದಿಷ್ಟ ಪ್ರಶ್ನೆ ಕೇಳಲೇಬೇಕು, ಇಲ್ಲದಿದ್ದರೆ ತನಿಖಾಧಿಕಾರಿ ವಿರುದ್ಧವೇ ಕಾನೂನು ಹೋರಾಟ: ಸ್ನೇಹಮಯಿ ಕೃಷ್ಣ
Advertisement
ಶಿಗ್ಗಾಂವಿ (Shiggaon) ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಜನ ಅನುಭವಿಸಿದ್ದಾರೆ, ಕಾಂಗ್ರೆಸ್ ಹಾಗೂ ಶಿಗ್ಗಾಂವಿ ಜನರ ಬಗ್ಗೆ ಬಹಳ ಅಂತರ ಇದೆ. ಕಾಂಗ್ರೆಸ್ ಸರ್ಕಾರ ಇದೆ, ಯಾವುದೇ ಕ್ಷೇತ್ರದಲ್ಲಿ ಏನಾಗಿದೆ ಎಂದು ನೋಡಲಿ. ಅವರು ಸವಣೂರಲ್ಲಿ 250 ಬೆಡ್ ಆಸ್ಪತ್ರೆ, ಶಿಗ್ಗಾಂವಿಯಲ್ಲಿ ಟ್ರೈನಿಂಗ್ ಸೆಂಟರ್, ಟೆಕ್ಸ್ಟೈಲ್ ಪಾರ್ಕ್, ಸವಣೂರಲ್ಲಿ ಆಯುರ್ವೇದ ಕಾಲೇಜ್ ಆಗಿದೆ ಅದನ್ನು ನೋಡಲಿ. 12 ಸಾವಿರ ಮನೆ ಕಟ್ಟಿದ್ದೇನೆ. ಇಲ್ಲಿ ಬೆಂಗಳೂರಿಗಿಂತ ಚೆನ್ನಾಗಿ ರಸ್ತೆ ಇದೆ. ಸಿಎಂ ಕಾರಿನಲ್ಲಿ ಹೋಗುವಾಗ ನಿದ್ದೆ ಮಾಡುತ್ತಾರೇನೋ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾರು, ಪಿಕಪ್ ವಾಹನ ಮುಖಾಮುಖಿ ಡಿಕ್ಕಿ- ಇಬ್ಬರು ಸಾವು
ಕಾಂಗ್ರೆಸ್ (Congress) ನಾಯಕರು ಹತಾಶರಾಗಿದ್ದಾರೆ, ಎಲ್ಲ ಸಚಿವ ಶಾಸಕರು ಹಾಗೂ ಈ ಸರ್ಕಾರ ನನ್ನ ಮೇಲೆ ದಂಡೆತ್ತಿ ಬಂದಿದೆ. ನಾನು ಪ್ರಶ್ನೆ ಮಾಡುತ್ತೇನೆ, ನನ್ನ ಕ್ಷೇತ್ರದ ಅಭಿವೃದ್ಧಿ ಏನಾಗಿದೆ ಎಂದು ನಾನು ಹೇಳುತ್ತೇನೆ. ಸಿಎಂ ಕ್ಷೇತ್ರದ ವರುಣಾದಲ್ಲಿ ಏನು ಅಭಿವೃದ್ಧಿ ಆಗಿದೆ ಎಂದು ಹೇಳಲಿ. ಸಚಿವರು ತಮ್ಮ ಕ್ಷೇತ್ರದ ಬಗ್ಗೆ ಹೇಳಲಿ. ಅಲ್ಪಸಂಖ್ಯಾತರ ಬಗ್ಗೆ ಇಷ್ಟೆಲ್ಲಾ ಮಾತಾಡುತ್ತಾರಲ್ಲಾ ಮಸೀದಿ ದರ್ಗಾಗಳಿಗೆ 10 ಸಾವಿರ ರೂಪಾಯಿ ಕೊಟ್ಟಿದ್ದೇನೆ. ಇವರ ಸರ್ಕಾರ ಬಂದ ಮೇಲೆ ವಾಪಸ್ ತೆಗೆದುಕೊಂಡರಲ್ವಾ? ಹಾಲುಮತದ ಸಮಾಜದ ಬಗ್ಗೆ ಸಿಎಂಗೆ ಮಾತಾನಾಡಲು ಹಕ್ಕೇ ಇಲ್ಲಾ ಎಂದರು. ಇದನ್ನೂ ಓದಿ: ಗುರು ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಾಕ್
ಕನಕದಾಸರ ಹುಟ್ಟುರು, ಕಾಗಿನೆಲೆ ಎರಡನ್ನೂ ಅಭಿವೃದ್ಧಿ ಮಾಡಿದ್ದು ಯಡಿಯೂರಪ್ಪ. ಕನಕಪೀಠದ ನಮ್ಮ ಗುರುಗಳಿಗೆ ಸಿಎಂ ಆಗಿ ದಾಷ್ಟದ ಮಾತನ್ನು ಆಡೋದು ಅವಮಾನವಾಗಿದೆ. ನಮ್ಮ ಗುರುಗಳು ಅವರು, ಇಲ್ಲಿ ಗುರು ಮತ್ತು ಭಕ್ತರ ಸಂಬಂಧ ಇದೆ. ಸೋಲಿನ ಭಯದಲ್ಲಿ ಇವರು ಗುರುಗಳನ್ನು ಎಳೆದು ತಂದಿದ್ದಾರೆ. ಸಿಎಂ ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Gujarat| ನಿರ್ಮಾಣ ಹಂತದಲ್ಲಿದ್ದ ಬುಲೆಟ್ ರೈಲು ಸೇತುವೆ ಕುಸಿತ- ಮೂವರು ಕಾರ್ಮಿಕರು ಸಾವು