ಬೆಂಗಳೂರು: ನಮ್ಮ ಮೆಟ್ರೋ ಬೆಂಗಳೂರಿಗೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಮೆಟ್ರೋ ಪಿಲ್ಲರ್ ಗಳು ಡಬಲ್ ಡೆಕ್ಕರ್ ಆಗಿ ಸಂಚಾರ ಸೇವೆ ನೀಡಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೈಟೆಕ್ ಟಚ್ ಹೆಚ್ಚಾಗಲಿದೆ. ಜಯದೇವ ಆಸ್ಪತ್ರೆ ಮುಂಭಾಗ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಡಬಲ್ ಡೆಕ್ಕರ್ ಮೆಟ್ರೋ ಬರಲಿದೆ. ಅಂದ್ರೆ ಒಂದೇ ಮಾರ್ಗದಲ್ಲಿ ಒಂದೇ ಪಿಲ್ಲರ್ ಮೇಲೆ ಮೆಟ್ರೋ ಹಾಗೂ ಕಾರು, ಬೈಕ್ ಗಳು ಸಂಚರಿಸುವ ಡಬಲ್ ಟ್ರ್ಯಾಕ್ ಬರಲಿದೆ. ನಾಗಪುರದಲ್ಲಿ ಡಬಲ್ ಟ್ರ್ಯಾಕ್ ಮೆಟ್ರೋ ಕಂ ರೋಡ್ ಲೈನ್ ಮಾಡಲಾಗಿದೆ.
Advertisement
Advertisement
ಈಗ ಇದೇ ಮಾದರಿಯಲ್ಲಿ ರಾಗಿಗುಡ್ಡ ಸ್ಟೇಷನ್ ನಿಂದ ಸಿಲ್ಕ್ ಬೋರ್ಡ್ ವರೆಗೂ 3.1 ಕಿ.ಮೀ ಡಬಲ್ ಡೆಕ್ಕರ್ ಟ್ರ್ಯಾಕ್ ಬರಲಿದೆ. ಸದ್ಯ ಜಯದೇವ ಮುಂಭಾಗ ಕಾಮಗಾರಿ ನಡೆಯುತ್ತಿದ್ದು, ಈ ಪ್ರಕಾರ ಫ್ಲೈಓವರ್ ಒಡೆಯಲಾಗುತ್ತದೆ. ನಂತರ ಇದೇ ಮಾರ್ಗದಲ್ಲಿ ನೆಲಭಾಗದಿಂದ ಪಿಲ್ಲರ್ ಮೊದಲ ಹಂತದಲ್ಲಿ ಕಾರು, ಬೈಕ್ ಎಂದರೆ ಲಘು ವಾಹನಗಳು ಸಂಚಾರಕ್ಕೆಂದು ರೋಡ್ ತಲೆಯೆತ್ತಲಿದೆ. ಹಾಗೇ ಭಾಗಶಃ ಅಂತರ ನೀಡಿ ಮತ್ತೆ ಅದೇ ಪಿಲ್ಲರ್ ಮೇಲೆ ಮೆಟ್ರೋ ಥರ್ಡ್ ಲೈನ್ ಸಿಸ್ಟಂ ಅಳವಡಿಸಿ ಎಲಿವೇಟೆಡ್ ಟ್ಯ್ರಾಕ್ ಮಾಡಲಾಗುತ್ತದೆ. ಇದರಿಂದ ಒಂದೇ ಖರ್ಚಿನಲ್ಲಿ ರಸ್ತೆ ಮೇಲಿನ ವಾಹನಗಳ ಒತ್ತಡ ನಿಯಂತ್ರಣ ಮಾಡಬಹುದಾಗಿದೆ.
Advertisement
Advertisement
ಈ ಮಾರ್ಗದಲ್ಲಿ ಸದ್ಯ ಒಟ್ಟು 6 ಕಿಮೀ ಕಾಮಗಾರಿ ನಡೆಯುತ್ತಿದ್ದು, 3 ಕಿ.ಮೀಗೆ ಮಾತ್ರ ಡಬಲ್ ಡೆಕ್ಕರ್ ಟ್ರ್ಯಾಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಣಾಮ ಜಯದೇವ ಜಂಕ್ಷನ್ ನಲ್ಲಿ ಸದಾ ಕಾಡುತ್ತಿದ್ದ ಟ್ರಾಫಿಕ್ ಸಮಸ್ಯೆ ಪರಿಹಾರ ಆಗಲಿದೆ. ಸುತ್ತಮುತ್ತಲಿನ 3 ಕಿ.ಮೀನಲ್ಲಿ ಮರಗಳು ಧರೆಗೆ ಉರುಳಲಿದೆ. ಉಳಿದಂತೆ ಈ ಮಾರ್ಗದಲ್ಲಿ ಯಾವುದೇ ಕಟ್ಟಡಕ್ಕೆ ಹಾನಿಯಾಗಲ್ಲ ಎನ್ನುತ್ತಿರುವ ಬಿಎಂಆರ್ ಸಿಎಲ್ ಹೊಸ ಪ್ರಯೋಗಕ್ಕೆ ಮುಂದಾಗಿದೆ.