ಬೆಂಗಳೂರು: ಇದೇ ಮೊದಲ ಬಾರಿಗೆ 34 ಕನ್ನಡಿಗರಿಗೆ ಐಎಎಸ್ ಪದವಿ ಭಾಗ್ಯ ದೊರೆತಿದೆ. 34 ಹಿರಿಯ ಕೆಎಎಸ್ ಅಧಿಕಾರಿಗಳಿಗೆ ಯುಪಿಎಸ್‍ಸಿ ಸಮಿತಿ ಐಎಎಸ್ ಪದವಿ ಕೊಡಲು ನಿರ್ಧಾರ ಮಾಡಿದೆ.
ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಭಾವ ಸಚಿವರ ನಾಲ್ವರು ಆಪ್ತ ಕಾರ್ಯದರ್ಶಿಗಳು ಐಎಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ. ಸಚಿವ ಜಾರ್ಜ್ ಆಪ್ತ ಕಾರ್ಯದರ್ಶಿ ಡಾ. ಶಿವಶಂಕರ್, ರೋಷನ್ ಬೇಗ್ ಆಪ್ತ ಕಾರ್ಯದರ್ಶಿ ಗೋಪಾಲಕೃಷ್ಣ, ಎಂ.ಬಿ.ಪಾಟೀಲ್ ಆಪ್ತ ಕಾರ್ಯದರ್ಶಿ ವೈ.ಎಸ್.ಪಾಟೀಲ್, ತನ್ವೀರ್‍ಸೇಠ್ ಆಪ್ತ ಕಾರ್ಯದರ್ಶಿ ರವಿಕುಮಾರ್ ಅವರು ಐಎಎಸ್ ಪದವಿ ಪಡೆದಿದ್ದಾರೆ. ಆದರೆ ಈ ಬಗ್ಗೆ ಆಡಳಿತ ವಲಯದಲ್ಲಿ ತೀವ್ರ ಚರ್ಚೆ ಶುರುವಾಗಿದೆ.
Advertisement
ಎಸಿಬಿಯಿಂದ ಕಿರುಕುಳಕ್ಕೆ ಒಳಗಾದ ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಅವರಿಗೂ ಕೂಡ ಐಎಎಸ್ ಭಾಗ್ಯ ಸಿಕ್ಕಿದೆ. ಆದರೆ ಲೋಕಾಯುಕ್ತ ಕೇಸ್ ವಿಚಾರಣೆಯಲ್ಲಿದ್ದ ರಾಜಮ್ಮ ಚೌಡರೆಡ್ಡಿ ಅವರಿಗೆ ಮಾತ್ರ ಐಎಎಸ್ ಭಾಗ್ಯ ದೊರೆತಿಲ್ಲ.
Advertisement
ಇದೇ ಮೊದಲ ಬಾರಿಗೆ 34 ಕನ್ನಡಿಗರಿಗೆ ಐಎಎಸ್ ಪದವಿ ಭಾಗ್ಯ ಸಿಕ್ಕಿದ್ದು, ಈ ಹಿರಿಯ ಕೆಎಎಸ್ ಅಧಿಕಾರಿಗಳಿಗೆ ಯುಪಿಎಸ್‍ಸಿ ಸಮಿತಿ ಐಎಎಸ್ ಕೊಡಲು ಒಪ್ಪಿದೆ. ಇನ್ನು ಇದೇ ವೇಳೆ ಕನ್ನಡಿಗರಿಗೆ ಐಎಎಸ್ ಬಡ್ತಿ ಸಿಗದಂತೆ ಉತ್ತರ ಭಾರತದ ಐಎಎಸ್ ಅಧಿಕಾರಿಗಳು ನಡೆಸಿದ್ದ ಕುತಂತ್ರ ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ.