ನೂಪುರ್‌ಗೆ ಬೆಂಬಲ – ಚಾಕುವಿನಿಂದ ಚುಚ್ಚಿ, ಹಾಕಿಸ್ಟಿಕ್‍ನಿಂದ ಹಲ್ಲೆ: ಐಸಿಯುನಲ್ಲಿ ಯುವಕನಿಗೆ ಚಿಕಿತ್ಸೆ

Advertisements

ಮುಂಬೈ: ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕೆ ಯವಕನ ಮೇಲೆ ಗುಂಪೊಂದು ದಾಳಿ ನಡೆಸಿ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದ ಅಹ್ಮದ್‍ನಗರ ಜಿಲ್ಲೆಯಲ್ಲಿ ನಡೆದಿದೆ.

Advertisements

ಪ್ರತೀಕ್ ಅಲಿಯಾಸ್ ಸನ್ನಿ ರಾಜೇಂದ್ರ ಪವಾರ್ (23) ಗಾಯಗೊಂಡ ಯುವಕ. ಆಗಸ್ಟ್ 4ರಂದು ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ 4 ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಪ್ರತೀಕ್‍ನ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಐಸಿಯುನಲ್ಲಿ ಆತನನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisements

ಪ್ರತೀಕ್ ಹಾಗೂ ಅಮಿತ್ ಮಾನೆ ಅವರು ತಮ್ಮ ಬೈಕ್‍ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗಬೇಕಿತ್ತು. ಈ ಹಿನ್ನೆಲೆಯಲ್ಲಿ ಪ್ರತೀಕ್ ಅಲ್ಲಿಯೇ ಹತ್ತಿರದಲ್ಲಿದ್ದ ಮೆಡಿಕಲ್ ಶಾಪ್ ಬಳಿ ಕಾಯುತ್ತಿದ್ದಾಗ 14 ಮಂದಿ ಬಂದಿದ್ದಾರೆ. ನಂತರ ಪ್ರತೀಕ್ ಮೇಲೆ ಚಾಕು, ಕೋಲು, ಹಾಕಿ ಸ್ಟಿಕ್‍ಗಳಿಂದ ಆ ಗುಂಪು ಹಲ್ಲೆ ನಡೆಸಿದೆ. ಇದನ್ನೂ ಓದಿ: ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಟು ಹಬ್ಬ ಆಚರಣೆ ಬೇಡ: ಶ್ರೀರಾಮುಲು

ಹಲ್ಲೆ ಮಾಡುವಾಗ ಆ ಗುಂಪಿನಲ್ಲಿದ್ದ ಒಬ್ಬಾತ ಪ್ರತೀಕ್, ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಹೇಳಿದ್ದನು ಎಂದು ಪೊಲೀಸ್‍ರಿಗೆ ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ದಾಳಿಕೋರರು ಪ್ರತೀಕ್‍ಗೆ ಉಮೇಶ್ ಕೋಲ್ಹೆಗೆ ಆದ ಗತಿಯೇ ಆಗಲಿದೆ ಎಂದು ಬೆದರಿಕೆ ಹಾಕಿದ್ದಾರೆ. ದಾಳಿಕೋರರಲ್ಲಿ ಒಬ್ಬನು ಪ್ರತೀಕ್ ಕಣ್ಣಿಗೆ ಹೊಡೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶೂ ಹಾಕಿಕೊಂಡೆ ದಸರಾ ಗಜಪಡೆಗೆ ಪೂಜೆ ಸಲ್ಲಿಸಿದ ಸಚಿವ ಉಮೇಶ್ ಕತ್ತಿ

Advertisements

Live Tv

Advertisements
Exit mobile version