ಮುಂಬೈ: ಗಣಪತಿ ವಿಸರ್ಜನೆ ಬಳಿಕ ಪುಣೆಯ ಮುನ್ಸಿಪಲ್ ಕಾರ್ಪೊರೆಷನ್(ಪಿಎಂಸಿ) ಘನತ್ಯಾಜ ಇಲಾಖೆ(ಎಸ್‌ಡಬ್ಲ್ಯುಎಂ) ನಗರದಲ್ಲಿ ಸುಮಾರು 21 ಟನ್‌ಗಳಷ್ಟು ಕಸವನ್ನು ಸಂಗ್ರಹಿಸಿದೆ. ಇದರಲ್ಲಿ ಸುಮಾರು 6 ಮಿನಿ ಟ್ರಕ್‌ಗಳಲ್ಲಿ ತುಂಬಲಾಗುವಷ್ಟು ಚಪ್ಪಲಿಗಳೇ ದೊರೆತಿವೆ ಎಂದು ವರದಿಯಾಗಿದೆ.
ಪುಣೆಯಲ್ಲಿ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಹಬ್ಬ ಕಳೆದ ಬಳಿಕ ಸುಮಾರು 1,037 ಪಿಎಂಸಿ ಸಿಬ್ಬಂದಿ ಬೀದಿಗಿಳಿದು ಕಸವನ್ನು ಸಂಗ್ರಹಿಸಿದ್ದಾರೆ. ಸ್ವಚ್ಛ ಸಂಸ್ಥೆ, ಜನವಾಣಿ ಸಂಸ್ಥೆ, ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ, ರೋಟರಿ ಕ್ಲಬ್, ಮರಾಠವಾಡ ಕಾಲೇಜು ಹಾಗೂ ಇತರ ಸಂಸ್ಥೆಗಳ ಸುಮಾರು 650 ಸ್ವಯಂ ಸೇವಕರು ಈ ಸ್ವಚ್ಛ ನಗರ ಅಭಿಯಾನಕ್ಕೆ ಕೈ ಜೋಡಿಸಿದ್ದರು ಎಂದು ಎಸ್‌ಡಬ್ಲ್ಯುಎಂ ಉಪ ಆಯುಕ್ತ ಆಶಾ ರಾವತ್ ತಿಳಿಸಿದರು. ಇದನ್ನೂ ಓದಿ: ಕೊನೆಗೂ ತೇಜಸ್ವಿ ನಿವಾಸಕ್ಕೆ ತಲುಪಿತು ಕಾಂಗ್ರೆಸ್ ದೋಸೆ – ಡೆಲಿವರಿ ಬಾಯ್ ಪೊಲೀಸರ ವಶಕ್ಕೆ
Advertisement
Advertisement
ಗಣಪತಿ ವಿಸರ್ಜನೆ ಮೆರವಣಿಗೆ ಲಕ್ಷ್ಮಿ ರಸ್ತೆ, ತಿಲಕ್ ರಸ್ತೆ, ಕುಮ್ಟೇಕರ್ ರಸ್ತೆ, ನಾರಾಯಣ ಪೇಠ ರಸ್ತೆ, ಬಾಜಿರಾವ್ ರಸ್ತೆ, ಶಿವಾಜಿ ರಸ್ತೆ, ಅಲ್ಕಾ ಚೌಕ್, ಖಂಡುಜಿ ಬಾಬಾ ಚೌಕ್, ಕರವೇ ರಸ್ತೆ, ಜಂಗ್ಲಿ ಮಹಾರಾಜ್ ರಸ್ತೆ, ಸೇನಾಪತಿ ಬಾಪಟ್ ರಸ್ತೆ, ಗಣೇಶಖಿಂಡ್ ರಸ್ತೆ, ಫರ್ಗುಸನ್ ಕಾಲೇಜು ರಸ್ತೆ, ಪ್ರಭಾತ್ ಮಾರ್ಗವಾಗಿ ಸಾಗಿದೆ ಎಂದು ವರದಿಗಳು ತಿಳಿಸಿವೆ.
Advertisement
ಮೆರವಣಿಗೆ ಸಾಗಿದ ಪ್ರದೇಶದಲ್ಲಿ ಕಸ ಸಂಗ್ರಹಿಸಲು ಪಿಎಂಸಿ 9 ಕಾಂಪ್ಯಾಕ್ಟರ್‌ಗಳು, 13 ಸಣ್ಣ ವಾಹನಗಳು, 6 ಟೆಂಪೋಗಳು, 8 ಟಿಪ್ಪರ್‌ಗಳು ಮತ್ತು 8 ಇತರ ವಾಹನಗಳನ್ನು ಬಳಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕುಂಬಳಕಾಯಿ 47,000 ರೂ.ಗೆ ಹರಾಜು