ಬೆಂಗಳೂರು: ಕಾಂಗ್ರೆಸ್ (Congress) ನವರು ಕಳುಹಿಸಿದ್ದ ದೋಸೆ (Dosa) ನನ್ನ ಕೈ ಸೇರಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯಗೆ ಇದೀಗ ಕೈ ಕಾರ್ಯಕರ್ತರು ಮಸಾಲೆ ದೋಸೆಯನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ ದೋಸೆ ಡೆಲಿವರಿ ಮಾಡಲು ಬಂದವನ್ನು ಹಿಡಿದು ಬಿಜೆಪಿ (BJP) ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement
ಮುಂಜಾಗೃತಾ ಕ್ರಮವಾಗಿ ಗಿರಿನಗರ ಪೊಲೀಸರು ಮೂವರನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ವಿನೋದ್ ಕುಮಾರ್, ವಿಶ್ವನಾಥ್ ಹಾಗೂ ನೂರ್ ಸಿಂಗ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧಪಟ್ಟ ಹಾಗೇ ಸದ್ಯ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಇದನ್ನೂ ಓದಿ: ಪಾರ್ಸೆಲ್ ಮಾಡಿರೋ 10 ದೋಸೆ ನನಗೆ ಬಂದಿಲ್ಲ, ಇದರಲ್ಲೂ ಮೋಸ: ಕಾಂಗ್ರೆಸ್ ವಿರುದ್ಧ ತೇಜಸ್ವಿ ಸೂರ್ಯ ಕಿಡಿ
Advertisement
Advertisement
ಏನಿದು ದೋಸೆ ಪಾರ್ಸೆಲ್?: ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ಪ್ರತಿಭಟನೆ ನಡೆಸಿ ಮಸಾಲೆ ದೋಸೆ ಡನ್ಜೋ ಮೂಲಕ ಕಳುಹಿಸಿ ಕೊಟ್ಟಿದ್ದರು. ಈ ಸಂಬಂಧ ಸಂಸದರು ಇಂದು, ಮಸಾಲೆ ದೋಸೆ ಬಂದಿಲ್ಲ ಎಂದು ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಡನ್ಜೋ ಡೆಲಿವರಿ ಬಾಯ್ ಮೂಲಕ ತೇಜಸ್ವಿ ಸೂರ್ಯ ಅವರ ಗಿರಿನಗರದ ನಿವಾಸದ ಬಳಿ ಕಳುಹಿಸಿದ್ದಾರೆ. ಈ ವೇಳೆ ನಿವಾಸದ ಮುಂದಿದ್ದ ಬಿಜೆಪಿ ಕಾರ್ಯಕರ್ತರು ಡೆಲಿವರಿ ಬಾಯ್ (Delivry Boy) ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.