ಮುಂಬೈ: ಪಾದಾಚಾರಿಗಳ ಮೇಲ್ಸೇತುವೆ (Foot Over Bridge) ಕುಸಿದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಮಹಾರಾಷ್ಟ್ರದ (Maharashtra) ಚಂದ್ರಾಪುರ (Chandrapur) ಬಲ್ಲಾರಶಾ ರೈಲ್ವೇ ನಿಲ್ದಾಣದಲ್ಲಿ (Railway Station) ನಡೆದಿದೆ.
#WATCH | Slabs fall off of a foot over bridge at Balharshah railway junction in Maharashtra’s Chandrapur; people feared injured pic.twitter.com/5VT8ry3ybe
— ANI (@ANI) November 27, 2022
Advertisement
ಸುಮಾರು 60 ಅಡಿ ಎತ್ತರದ ಫುಟ್ಓವರ್ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದ್ದು, ಹಲವು ಪ್ರಯಾಣಿಕರು ಸೇತುವೆಯಿಂದ ರೈಲ್ವೇ ಹಳಿ ಮೇಲೆ ಬಿದ್ದಿದ್ದಾರೆ. ಘಟನೆಯಿಂದ 20ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಇದನ್ನೂ ಓದಿ: ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ
Advertisement
Advertisement
ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಗಾಯಾಳುಗಳಲ್ಲಿ 8 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಸೇವೆ ಮಾಡಲು ನೇಮಕವಾಗಿದ್ರು 10 ಜನ!