ದಿಸ್ಪುರ: ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೋ ಮರಡೋನಾ ಅವರ ಕಳುವಾಗಿದ್ದ, ಹಲವು ವಸ್ತುಗಳು ಪತ್ತೆಯಾಗಿವೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.
ಸುಮಾರು 20 ಲಕ್ಷ ರೂ. ಮೌಲ್ಯದ ವಾಚ್ ಅಸ್ಸಾಂ ಮೂಲದ ವ್ಯಕ್ತಿಯ ಬಳಿ ಇತ್ತು. ಈತ ದುಬೈನಿಂದ ಅಸ್ಸಾಂಗೆ ವಾಪಸ್ಸಾದಾಗ ವಾಚ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಅದರ ಬೆನ್ನಲ್ಲೇ ಡಿಯಾಗೊ ಮರಡೋನಾ ಅವರಿಗೆ ಸೇರಿದೆಯೆನ್ನಲಾದ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 20 ಲಕ್ಷ ಮೌಲ್ಯದ ಮರಡೋನಾ ವಾಚ್ ಅಸ್ಸಾಂನಲ್ಲಿ ವಶಕ್ಕೆ
Advertisement
It is to be ascertained how much of them belong to Maradona.@assampolice @DGPAssamPolice @gpsinghips @HardiSpeaks pic.twitter.com/oNE1hEn9NR
— Sivasagar Police (@SivasagarPol) December 12, 2021
Advertisement
ಕೈಗಡಿಯಾರವನ್ನು ಕಳವು ಮಾಡಿದ್ದ ಆರೋಪಿ ವಜೀದ್ ಹುಸೇನ್ ಸಂಬಂಧಿಕರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಮರಡೋನಾ ಅವರಿಗೆ ಸೇರಿದ ವಸ್ತುಗಳಿವೆ ಎನ್ನಲಾಗಿದೆ. ಲೈಟರ್‍ಗಳು, ಟ್ರ್ಯಾಕ್ ಪ್ಯಾಂಟ್, ಟಿ- ಶರ್ಟ್, ಶೂಗಳು, ಆಟಿಕೆ ಗೊಂಬೆ, ವಾಚ್, ಲೈಟರ್, ಕ್ಯಾಪ್ ಮತ್ತು ಐಪ್ಯಾಡ್‍ಗಳನ್ನು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
Advertisement
ಫುಟ್ಬಾಲ್ ಕ್ರೀಡಾ ಜಗತ್ತಿನಲ್ಲಿ ಅರ್ಜೆಂಟೀನಾದ ಡಿಯಾಗೊ ಮರಡೋನಾ ಹೆಸರು ಸುಪ್ರಸಿದ್ಧ. ಇವರು 2020ರ ನವೆಂಬರ್‍ನಲ್ಲಿ ಹೃದಯಾಘಾತದಿಂದ ನಿಧನರಾದರು. ದುಬೈನ ಸಂಗ್ರಹಾಲಯದಲ್ಲಿ ಹಲವು ಪ್ರಮುಖ ವಸ್ತುಗಳೊಂದಿಗೆ ಇವರ ವಾಚ್ ಅನ್ನೂ ಸಂಗ್ರಹಿಸಿಡಲಾಗಿತ್ತು.
Ref recovery of @hublot Watch of Late Diego Maradona, more memorabilia have been recovered. Jacket, track pant, T shirt, Shoes, toy doll, Squash racket, watch, lighters,Cap and iPads. @assampolice @CMOfficeAssam pic.twitter.com/Fntn1sT3OT
— GP Singh (@gpsinghips) December 12, 2021
ಮರಡೋನಾ ಅವರ ವಾಚ್ ಅನ್ನು ವಾಜಿದ್ ಹುಸೇನ್ ಕಳ್ಳತನ ಮಾಡಿದ್ದ. ನಂತರ ಅದನ್ನು ದುಬೈನಿಂದ ಅಸ್ಸಾಂಗೆ ಸಾಗಿಸಲು ಯತ್ನಿಸಿದ್ದ. ಈ ಬಗ್ಗೆ ದುಬೈ ಪೊಲೀಸರು ಅಸ್ಸಾಂನ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಡಿಸೆಂಬರ್ 9ರಂದು ಬೆಳಗ್ಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತಾ ಅವರು ತಿಳಿಸಿದ್ದರು. ಇದೀಗ ಪತ್ತೆಯಾಗಿರುವ ವಸ್ತುಗಳಲ್ಲಿ ಮರಡೋನಾ ಅವರಿಗೆ ಸೇರಿದ ವಸ್ತುಗಳು ಯಾವುವು ಎನ್ನುವ ಬಗ್ಗೆ ತನಿಖೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದಿಶಾ ಪಟಾನಿ ಹಾಟ್ ಅವತಾರಕ್ಕೆ ಟೈಗರ್ ಶ್ರಾಫ್ ಹೇಳಿದ್ದೇನು ಗೊತ್ತಾ?