BollywoodCinemaLatestMain Post

ದಿಶಾ ಪಟಾನಿ ಹಾಟ್ ಅವತಾರಕ್ಕೆ ಟೈಗರ್ ಶ್ರಾಫ್ ಹೇಳಿದ್ದೇನು ಗೊತ್ತಾ?

ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಹಾಟ್ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ವೀಡಿಯೋಗೆ ನಟ ಟೈಗರ್ ಶ್ರಾಫ್ ರಿಯಾಕ್ಟ್ ಮಾಡಿದ್ದಾರೆ.

disha panati

ಬಾಲಿವುಡ್ ಯುವ ನಟಿಯರಲ್ಲಿ ಒಬ್ಬರಾದ ದಿಶಾ ಪಟಾಣಿ ಸದ್ಯ ಬಾಲಿವುಡ್ ಬೇಡಿಕೆ ನಟಿಯರಲ್ಲಿ ಒಬ್ಬರು. ತಮ್ಮ ಬ್ಯೂಸಿ ಶೆಡ್ಯೂಲ್‍ಗಳ ಮಧ್ಯೆ ಆಗಾಗ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೂ ಟೈ ನೀಡುವ ದಿಶಾ ಪಟಾನಿ ಇದೀಗ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹೊಸ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಈ ವೀಡಿಯೋದಲ್ಲಿ ದಿಶಾ ಜಿಮ್ ಉಡುಗೆ ತೊಟ್ಟು, ಜಿಮ್ ರೂಮ್ ಕನ್ನಡಿ ಮುಂದೆ ಕೈನಲ್ಲಿ ಮೊಬೈಲ್ ಹಿಡಿದು ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ವೀಡಿಯೋ ಸೆರೆಹಿಡಿದಿದ್ದಾರೆ. ಇನ್ನೂ ಈ ವೀಡಿಯೋ ನೋಡಿ ದಿಶಾ ಪಟಾನಿ ಹಾಟ್ ಅವತಾರಕ್ಕೆ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದು, ವೀಡಿಯೋಗೆ ಹಲವಾರು ಲೈಕ್ಸ್ ಹಾಗೂ ಅನೇಕ ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ವೀಡಿಯೋಗೆ ನಟ ಟೈಗರ್ ಶ್ರಾಫ್ ಕೂಡ ಲೈಕ್ ನೀಡಿದ್ದು, ಫೈರ್ ಹಾಗೂ ಕ್ಲ್ಯಾಪ್ ಮಾಡುತ್ತಿರುವ ಎಮೋಜಿಯನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಪ್ರೀತಿಸಿದ್ದಕ್ಕಾಗಿ ನನ್ನ ಎಲ್ಲಾ ಹುಡುಗರಿಗೆ ಥ್ಯಾಂಕ್ಸ್: ಆಶಿಕಾ ರಂಗನಾಥ್

ಕೆಲವು ದಿನಗಳ ಹಿಂದೆಯಷ್ಟೇ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದ ದಿಶಾ ಪಟಾನಿ ಅಲ್ಲಿನ ಸುಂದರವಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅಲ್ಲದೇ ಕಡಲ ತೀರವೊಂದರಲ್ಲಿ ಬಿಕಿನಿ ತೊಟ್ಟು ಫೋಟೋಗೆ ಸೆಕ್ಸಿಯಾಗಿ ಪೋಸ್ ನೀಡಿದ್ದರು. ಇದನ್ನೂ ಓದಿ: ಯಶ್ ಜೊತೆ ಸೆಲ್ಫಿಗಾಗಿ ಕಷ್ಟ ಪಟ್ಟ ರಾಧಿಕಾ ಪಂಡಿತ್

ಕೆಲವು ತಿಂಗಳ ಹಿಂದೆಯಷ್ಟೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ರಾಧೆ ಸಿನಿಮಾದ ಹಾಡೊಂದರಲ್ಲಿ ಸಲ್ಲುಗೆ ಲಿಪ್‍ಲಾಕ್ ಮಾಡುವ ಮೂಲಕ ದಿಶಾ ಪಟಾನಿ ಸಖತ್ ಸದ್ದು ಮಾಡಿದ್ದರು. ಸದ್ಯ ತಾರಾ ಸುತಾರಿಯಾ, ಅರ್ಜುನ್ ಕಪೂರ್ ಮತ್ತು ಜಾನ್ ಅಬ್ರಹಾಂ ಅಭಿನಯಿಸುತ್ತಿರುವ ಏಕ್ ವಿಲನ್-2 ಸಿನಿಮಾದಲ್ಲಿ ದಿಶಾ ಪಟಾನಿ ಬ್ಯೂಸಿಯಾಗಿದ್ದಾರೆ.

Leave a Reply

Your email address will not be published.

Back to top button