ಹುಬ್ಬಳ್ಳಿ: ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಇಂದು ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು.
ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸ್ವಚ್ಛತಾ ಸೇನಾನಿಗಳಂತೆ ಕಾರ್ಯನಿರ್ವಹಿಸುತ್ತಿರುವ (Frontline workers) ಪಾಲಿಕೆಯ ಪೌರಕಾರ್ಮಿಕರು, ಆಟೋ ಟಿಪ್ಪರ್ ಚಾಲಕರು ಮತ್ತು ಸಹಾಯಕರು, ಟ್ರ್ಯಾಕ್ಟರ್ ಡ್ರೈವರ್‍ಗಳು, ಲೋಡರ್ಸ್, ಜೆಟ್ಟಿಂಗ್ ಯಂತ್ರದ ಸಿಬ್ಬಂದಿಗೆ 2,800 ಆಹಾರ ಸಾಮಗ್ರಿಗಳ ಕಿಟ್ ವಲಯವಾರು ವಿತರಿಸಲಾಯಿತು.
Advertisement
Advertisement
ಕಿಟ್ 5 ಕೆ.ಜಿ ಅಕ್ಕಿ, 1ಕೆ.ಜಿ ತೊಗರಿ ಬೇಳೆ, 1 ಲೀಟರ್ ಎಣ್ಣೆ, ಮಸಾಲೆ ಪದಾರ್ಥಗಳು, ಅರ್ಧ ಕೆಜಿ ಕಡಲೆಬೇಳೆ ಸೇರಿದಂತೆ ಹತ್ತು ಪದಾರ್ಥಗಳನ್ನು ಒಳಗೊಂಡಿರುತ್ತದೆ. ಈ ಆಹಾರ ಪದಾರ್ಥಗಳ ಕಿಟ್ ಗಳನ್ನು ಪಾಲಿಕೆಯ ಆಯುಕ್ತರಾದ ಡಾ.ಸುರೇಶ್ ಬಿ ಇಟ್ನಾಳ ರವರಿಗೆ ಇನ್ಫೋಸಿಸ್ ಫೌಂಡೇಶನ್ನಿನ ಅಮೋಲ್ ಕುಲಕರ್ಣಿ ಹಸ್ತಾಂತರಿಸಿದರು.
Advertisement
Advertisement
ಇನ್ಫೋಸಿಸ್ ಫೌಂಡೇಶನ್ ನೆರವಿನ ಕುರಿತು ಹಾಗೂ ಸಮಾಜಮುಖಿ ಕಾರ್ಯಗಳ ಕುರಿತು ಪಾಲಿಕೆಯ ಆಯುಕ್ತರು ಮುಕ್ತಕಂಠದಿಂದ ಶ್ಲಾಘನೆ ಮಾಡಿದರು. ಈ ಸಂಧರ್ಭದಲ್ಲಿ ಪಾಲಿಕೆಯ ಜಂಟಿ ಆಯುಕ್ತರಾದ ಅಜೀಜ್ ದೇಸಾಯಿ, ಘನತ್ಯಾಜ್ಯವಸ್ತು ನಿರ್ವಹಣೆ ವಿಭಾಗದ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ್, ಪಾಲಿಕೆ ಸಿಬ್ಬಂದಿ, ಇನ್ಫೋಸಿಸ್ ಫೌಂಡೇಶನ್ ಸಿಬ್ಬಂದಿ ಹಾಜರಿದ್ದರು.